masthmagaa.com:

2008ರಲ್ಲಿ ಇಡೀ ಬೆಂಗಳೂರನ್ನೇ ನಡುಗಿಸಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶೋಯೆಬ್ ಎಂಬಾತನನ್ನು ಬೆಂಗಳೂರಿನ ಉಗ್ರ ನಿಗ್ರಹ ದಳ ಕೇರಳದಲ್ಲಿ ಬಂಧಿಸಿದೆ. ಕೇರಳದ ತಿರುವನಂತಪುರಂ ಏರ್​ಪೋರ್ಟ್​ನಲ್ಲಿ ಈತನನ್ನು ಅರೆಸ್ಟ್ ಮಾಡಲಾಗಿದೆ ಅಂತ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಸರಣಿ ಸ್ಫೋಟದ ಬಳಿಕ ಈತ ತಲೆಮರೆಸಿಕೊಂಡಿದ್ದ. ಇದೀಗ ಬರೋಬ್ಬರಿ 12 ವರ್ಷಗಳ ಆರೋಪಿ ಶೋಯೆಬ್ ಸಿಕ್ಕಿಬಿದ್ದಿದ್ದಾನೆ.

ಅಂದ್ಹಾಗೆ 2008ರ ಜುಲೈ 25ರಂದು ಮಧ್ಯಾಹ್ನ ಬೆಂಗಳೂರಿನ ಹಲವೆಡೆ ಒಂದಾದ ಮೇಲೊಂದರಂತೆ ಬಾಂಬ್​ಗಳು ಸ್ಫೋಟಗೊಂಡಿದ್ದವು. ಮೊದಲಿಗೆ ಮಧ್ಯಾಹ್ನ 1.20ರ ಸುಮಾರಿಗೆ ಮಡಿವಾಳದ ಬಸ್​ ಡಿಪೋ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಕೆಲವೇ ಕ್ಷಣಗಳ ನಂತರ ಮೈಸೂರು ರಸ್ತೆ, ಆಡುಗೋಡಿ, ಕೋರಮಂಗಲ, ವಿಠ್ಠಲ್ ಮಲ್ಯ ರಸ್ತೆ, ಲ್ಯಾಂಗ್​ಪೋರ್ಡ್​ ರಸ್ತೆ, ರಿಚ್​ಮಂಡ್​ ಸರ್ಕಲ್​ ಬಳಿ ಸ್ಫೋಟ ನಡೆದಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಸ್ಫೋಟಕ್ಕೆ ಟೈಮ್​ ಬಾಂಬ್​ ಮತ್ತು ಗಿಲೆಟಿನ್ ಕಡ್ಡಿಗಳನ್ನು ಬಳಕೆ ಮಾಡಲಾಗಿತ್ತು. ಪ್ರಕರಣ ಸಂಬಂಧ 2008ರಿಂದ ಇಲ್ಲಿವರೆಗೆ ಹಲವರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ಬಂಧಿತರ ಪಟ್ಟಿಗೆ ಶೋಯೆಬ್ ಕೂಡ ಸೇರಿಕೊಂಡಿದ್ದಾನೆ.

-masthmagaa.com

Contact Us for Advertisement

Leave a Reply