ಗರ್ಭಪಾತ ಲೀಗಲ್ ಮಾಡಿದ ಅರ್ಜೆಂಟೀನಾ! ಒಳ್ಳೆದ್ದೋ, ಕೆಟ್ಟದ್ದೋ?

masthmagaa.com:

ಅರ್ಜೆಂಟೀನಾ.. ದಕ್ಷಿಣ ಅಮೆರಿಕ ಖಂಡದಲ್ಲಿ ಬರುವ ಈ ದೇಶದಲ್ಲೀಗ ಒಂದು ಐತಿಹಾಸಿಕ ಕಾನೂನನ್ನ ಜಾರಿಗೆ ತರಲಾಗಿದೆ. ಅಲ್ಲೀಗ ಗರ್ಭಪಾತವನ್ನ ಲೀಗಲ್ ಮಾಡಲಾಗಿದೆ.. ಗರ್ಭಧಾರಣೆ ಮಾಡಿದ 14 ವಾರಗಳ ಒಳಗೆ ಅಂದ್ರೆ ಮೂರು ತಿಂಗಳ ಒಳಗೆ ಅಬಾರ್ಷನ್ ಮಾಡಿಸಬಹುದು. ಹಾಗಂತ ಅರ್ಜೆಂಟೀನಾದಲ್ಲಿ ಅಬಾರ್ಷನ್​ಗೆ ಅವಕಾಶ​ ಇರ್ಲಿಲ್ಲ ಅನ್ಕೋಬೇಡಿ. ಈ ಹಿಂದೆಯೂ ಇತ್ತು. ಆದ್ರೆ ಆಗ ರೇಪ್ ಸಂತ್ರಸ್ತೆಯರು ಮತ್ತು ಮೆಡಿಕಲ್ ಎಮರ್ಜೆನ್ಸಿ ಇರೋರು ಮಾತ್ರ ಗರ್ಭಪಾತ ಮಾಡಿಸಿಕೊಳ್ಳಬಹುದಿತ್ತು. ಆದ್ರೀಗ ಯಾರ್ ಬೇಕಿದ್ರೂ ಆಸ್ಪತ್ರೆಗೆ ಹೋಗಿ ಅಬಾರ್ಷನ್ ಮಾಡಿಸಿಕೊಳ್ಳಬಹುದು. ಅದಕ್ಕೀಗ ಕಾನೂನಿನ ಮಾನ್ಯತೆ ಸಿಕ್ಕಿದೆ. ಈ ಐತಿಹಾಸಿಕ ಕಾನೂನನ್ನ ಒಂದಷ್ಟು ಜನ ಸ್ವಾಗತಿಸಿದ್ರೆ, ಇನ್ನೊಂದಷ್ಟು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ಪರ ಇರೋರ ವಾದ ಏನಂದ್ರೆ, ಇದರಿಂದ ಮಹಿಳೆಯರಿಗೆ ಹೆಚ್ಚಿನ ಹಕ್ಕು ನೀಡಿದಂತಾಗುತ್ತೆ. ಅನ್​ವಾಂಟೆಡ್​ ಪ್ರೆಗ್ನೆನ್ಸಿಗಳನ್ನ ತಡೀಬಹುದು ಅನ್ನೋದು. ಇದನ್ನ ವಿರೋಧಿಸುತ್ತಿರೋರು, ಗರ್ಭದಲ್ಲೇ ಮಗುವನ್ನ ಸಾಯಿಸೋದು ಜೀವಿಸುವ ಹಕ್ಕಿಗೆ ವಿರುದ್ಧ. ಅನ್​ವಾಂಟೆಡ್​ ಪ್ರಗ್ನೆನ್ಸಿಗೆ ಇದು ಸಲ್ಯೂಷನ್ ಅಲ್ಲ, ಬದಲಾಗಿ ಲೈಂಗಿಕ ಶಿಕ್ಷಣವನ್ನ ಹೆಚ್ಚಿಸಬೇಕು ಅಂತಿದ್ದಾರೆ. ಮತ್ತೊಂದು ವಿಚಾರ ಅಂದ್ರೆ ಈಗಿನ ಪೋಪ್ ಇದಾರಲಾ, ಪೋಪ್​ ಫ್ರಾನ್ಸಿಸ್​, ಅವರು ಹುಟ್ಟಿರೋದು ಇದೇ ಅರ್ಜೆಂಟೀನಾದಲ್ಲಿ. ಸೋ ಅಬಾರ್ಷನ್​ ಲೀಗಲ್ ಮಾಡಿರೋದನ್ನ ಅಲ್ಲಿನ ಪವರ್​ಫುಲ್​ ಕ್ಯಾಥೊಲಿಕ್ ಚರ್ಚ್​ ಕೂಡ ವಿರೋಧಿಸಿದೆ. ಅರ್ಜೆಂಟೀನಾದಲ್ಲಿ ಅಬಾರ್ಷನ್ ಲೀಗಲ್ ಮಾಡ್ಬೇಕು ಎಂಬ ಹೋರಾಟ 2015ರಿಂದಲೇ ನಡೀತಿತ್ತು. 2017ರಲ್ಲಿ ಅಮೆರಿಕದಲ್ಲಿ ಶುರುವಾದ ‘ಮೀ ಟೂ’ ಕ್ಯಾಂಪೇನ್ ಈ ಹೋರಾಟಕ್ಕೆ ಮತ್ತಷ್ಟು ಬಲ ನೀಡ್ತು. ಇದರ ಪರಿಣಾಮ 2018ರಲ್ಲಿ ಅಬಾರ್ಷನ್ ಲೀಗಲ್​​ ಮಾಡುವ ಮಸೂದೆಯನ್ನ ಅರ್ಜೆಂಟೀನಾದ ಸಂಸತ್​ನಲ್ಲಿ ಮಂಡಿಸಲಾಯ್ತು.​ ಆದ್ರೆ ಆಗ ಅದು ಅಂಗೀಕಾರವಾಗಿರಲಿಲ್ಲ, ಈಗ ಆಗಿದೆ. ಗರ್ಭಪಾತವನ್ನ ಜಗತ್ತಿನ ಹಲವು ದೇಶಗಳು ಲೀಗಲ್ ಮಾಡಿವೆ. ಅದ್ರಲ್ಲಿ ಬ್ರಿಟನ್ ಕೂಡ ಒಂದು. ಇಲ್ಲಿ ಬ್ರಿಟನ್​ಗೆ ಸ್ವಲ್ಪ ಹೇಳಬೇಕು. 2012ರಲ್ಲಿ ಸೆಪ್ಟಿಸೀಮಿಯಾದಿಂದ ಬಳಲುತ್ತಿದ್ದ ಕರ್ನಾಟಕ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನರ್​ ಅವರಿಗೆ ಗರ್ಭಪಾತ ಮಾಡಲು ಬ್ರಿಟನ್​ ಆಸ್ಪತ್ರೆಗಳು ನಿರಾಕರಿಸಿದ್ವು. ಇದರ ಪರಿಣಾಮ ಅವರು ಮೃತಪಟ್ಟಿದ್ದರು. ಇದಾದ ಬಳಿಕ ಬ್ರಿಟನ್​ನಲ್ಲಿ ಅಬಾರ್ಷನ್​ಗೆ ಅವಕಾಶ ಕೊಡಬೇಕು ಅನ್ನೋ ಕೂಗು ಕೇಳಿ ಬಂದು, ಈಗ ಅಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಅಬಾರ್ಷನ್​ ಮಾಡಿಸಲು ಅವಕಾಶ ನೀಡಲಾಗಿದೆ.

-masthmagaa.com

Contact Us for Advertisement

Leave a Reply