ಅಗ್ನಿವೀರ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ!

masthmagaa.com:

ಕಳೆದ ವರ್ಷ ಕೇಂದ್ರ ಸರ್ಕಾರ ಪರಿಚಯಿಸಿರೋ ಅಗ್ನಿವೀರ್‌ ನೇಮಕಾತಿಯಲ್ಲಿ ಬದಲಾವಣೆ ಮಾಡಲಾಗಿದೆ. ಸೇನಾಪಡೆಗೆ ಸೇರೋಕೆ ಬಯಸೊ ಅಭ್ಯರ್ಥಿಗಳು ಮೊದಲು ಆನ್‌ಲೈನ್‌ ಮೂಲಕ ಸಾಮಾನ್ಯ ಪ್ರವೇಶದ ಪರೀಕ್ಷೆ (CEE)ಗೆ ಹಾಜರಾಗಬೇಕು. ನಂತರ ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ ಅಂತ ತಿಳಿಸಿದೆ. ಈ ಮುಂಚೆ ಅಗ್ನಿವೀರ್‌ಗಳ ನೇಮಕಾತಿ ಪ್ರಕ್ರಿಯೆ ವಿಭಿನ್ನವಾಗಿತ್ತು. ಅಭ್ಯರ್ಥಿಗಳು ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು, ನಂತರ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.ಕೊನೆಯ ಹಂತವಾಗಿ CEEಗೆ ಅರ್ಹತೆ ಪಡೆಯಬೇಕಾಗಿತ್ತು. ಇನ್ನು 2023-24ರಲ್ಲಿ ನಡೆಯಲಿರುವ ನೇಮಕಾತಿಯಲ್ಲಿ ಈ ಹೊಸ ಪ್ರಕ್ರಿಯೆ ಅನ್ವಯವಾಗಲಿದೆ.

-masthmagaa.com

Contact Us for Advertisement

Leave a Reply