ಖಾನ್ S/O ಖಾನ್ ಇನ್ನೂ 1 ವಾರ ‘ಬಂಧಿ’ಖಾನ್!

masthmagaa.com:

ಕ್ರೂಸ್ ಶಿಪ್ ನಶಾ ನಂಟಿನ ಕೇಸ್ ಸಂಬಂಧ ಶಾರುಖ್ ಮಗ ಆರ್ಯನ್ ಖಾನ್ ಸೇರಿ ಮೂವರ ಜಾಮೀನು ಅರ್ಜಿ ಸಂಬಂಧ ತೀರ್ಪು ವಿಳಂಬ ಆಗಿದೆ. ಮುಂಬೈನ್ ವಿಶೇಷ NDPS ನ್ಯಾಯಾಲಯ ತೀರ್ಪನ್ನ ಅಕ್ಟೋಬರ್ 20ಕ್ಕೆ ಪ್ರಕಟಿಸೋದಾಗಿ ಹೇಳಿದೆ. ಇದೇ ವೇಳೆ, ಆರ್ಯನ್ ಖಾನ್ ಹಾಗೂ ಇತರ 5 ಆರೋಪಿಗಳನ್ನ ಇದುವರೆಗೂ ಆರ್ಥ್ ರೋಡ್ ಜೈಲಿನ ಕ್ವಾರಂಟೈನ್ ಸೆಲ್ ನಲ್ಲಿ ಇಡಲಾಗಿತ್ತು. ಈಗ ಕೋವಿಡ್ ರಿಪೋರ್ಟ್ ಕೂಡ ಬಂದಿದ್ದು ಅವರನ್ನೆಲ್ಲ ಮಾಮೂಲಿ ಖೈದಿಗಳ ಸೆಲ್ ಗೆ ಶಿಫ್ಟ್ ಮಾಡಲಾಗಿದೆ ಅಂತಾ ಜೈಲಿನ ಸೂರಿಂಟೆಂಡೆಂಟ್ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ನಶಾ ಸಾಮಾಗ್ರಿ ಕೇಸಲ್ಲಿ ಅರ್ಮಾನ್ ಕೊಹಿಲಿ ಹಾಗೂ ಇನ್ನಿಬ್ಬರ ಜಾಮೀನು ಅರ್ಜಿ ರಿಜೆಕ್ಟ್ ಆಗಿದೆ.

-masthmagaa.com

Contact Us for Advertisement

Leave a Reply