ಅಮೆರಿಕದಲ್ಲಿ ಕೊರೋನ 5ನೇ ಅಲೆ! ಆದ್ರೆ ಟ್ರಂಪ್ ಮಾತ್ರ ಕೇರೇ ಮಾಡಲ್ವಂತೆ!

masthmagaa.com:

ಅಮೆರಿಕದಲ್ಲಿ ಕೇವಲ 2 ವಾರಗಳ ಹಿಂದೆ, ವ್ಯಾಕ್ಸಿನೇಶನ್ ತುಂಬಾ ಚೆನ್ನಾಗ್ ಮಾಡಿದೀವಿ.., ಸೋ ನಾವ್ ಕೊರೋನ ಗೆದ್ದೇ ಬಿಟ್ವಿ ಅನ್ನೋ ಸಂಭ್ರಮ ಇತ್ತು. ಆದ್ರೆ ಈಗ ಅಲ್ಲಿ ‘ಪ್ಯಾಂಡೆಮಿಕ್ ಆಫ್ ಅನ್ ವ್ಯಾಕ್ಸಿನೇಟೆಡ್’ ಶುರುವಾಗಿದೆ. ಬೈಡೆನ್ ಸರ್ಕಾರ ಏನೇ ಬಾಯಿ ಬಡಿದುಕೊಂಡರೂ ಇನ್ನೂ ಕೆಲವರು ಅಲ್ಲಿ ಲಸಿಕೆ ಹಾಕಿಸಿಕೊಳ್ತಿಲ್ಲ. ಇದರ ಪರಿಣಾಮ ಅಮೆರಿಕದಲ್ಲಿ 5ನೇ ಅಲೆ ಶುರುವಾದ ಹಾಗೆ ಕಾಣಿಸ್ತಿದೆ. ಹೀಗಾಗಿ ಕೆಲವೇ ದಿನಗಳ ಹಿಂದೆ ಎರಡೂ ಡೋಸ್ ಆದವರು ಇನ್ಮೇಲೆ ಮಾಸ್ಕ್ ಹಾಕೊಳ್ಳಬೇಕು ಅಂತಿಲ್ಲ ಅಂತ ಅನೌನ್ಸ್ ಮಾಡಿದ್ದ ಸರ್ಕಾರ, ಮತ್ತೆ ಈಗ ಕೆಲ ಪ್ರದೇಶಗಳಲ್ಲಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದೆ. ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೂ ಹೈ ರಿಸ್ಕ್ ಪ್ರದೇಶಗಳಲ್ಲಿರೋರು ಮತ್ತೆ ಮಾಸ್ಕ್ ಧರಿಸೋದನ್ನ ಶುರು ಮಾಡಬೇಕು ಅಂತ ಸೂಚಿಸಲಾಗಿದೆ. ಜೊತೆಗೆ ಉತ್ತಮ ಆರಂಭದ ಬಳಿಕ ಈಗ ಮತ್ತೆ ಲಸಿಕೆ ಅಭಿಯಾನ ನಿಧಾನ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಅಷ್ಟೂ ನೌಕರರಿಗೆ ವ್ಯಾಕ್ಸಿನ್ ಕಡ್ಡಾಯ ಮಾಡುವ ಬಗ್ಗೆ ಬೈಡೆನ್ ಸರ್ಕಾರ ಚಿಂತನೆ ನಡೆಸ್ತಿದೆ. ಆದ್ರೆ ಕೊರೋನ ನಿರ್ವಹಣೆಯಲ್ಲಿ ವಿಫಲಾದ್ರು ಅಂತಾ ಹಣೆಪಟ್ಟಿ ಹೊತ್ತು, ನಂತರ ಸೋತು ಮಾಜಿಯಾಗಿರೋ ಡೊನಾಲ್ಡ್ ಟ್ರಂಪ್ ಮಾತ್ರ ಇನ್ನೂ ಪಾಠ ಕಲಿತಂಗೆ ಕಾಣ್ತಿಲ್ಲ. ಇವ್ರು ಬೈಡೆನ್ ಸರ್ಕಾರದ ಈ ಮೇಲೆ ಹೇಳಿದ ಕ್ರಮಗಳನ್ನ ಟೀಕಿಸಿದ್ದಾರೆ. ‘ನಾವು ಮತ್ತೆ ಆ ದಿನಗಳಿಗೆ ವಾಪಾಸ್ ಹೋಗಲ್ಲ. ನಾವು ಮತ್ತೆ ನಮ್ಮ ಮಕ್ಕಳಿಗೆ ಮಾಸ್ಕ್ ಹಾಕೋದಿಲ್ಲ. ಅಮೆರಿಕನ್ನರು ಧೈರ್ಯಶಾಲಿಗಳು. ಅವರಿಗೆ ಕೊರೋನ ಮಧ್ಯೆನೂ ಸೇಫಾಗಿರೋದು ಹೇಗೆ, ಫೈಟ್ ಬ್ಯಾಕ್ ಮಾಡೋದು ಹೇಗೆ ಅಂತಾ ಗೊತ್ತಾಗೋಗಿದೆ’ ಅಂದಿದ್ದಾರೆ.

-masthmagaa.com

Contact Us for Advertisement

Leave a Reply