ಬಿಜೆಪಿಯಿಂದ ಇಬ್ಬಿಬ್ಬರು ನಾಮಪತ್ರ ಸಲ್ಲಿಸಿದ್ದು ಯಾಕೆ ಗೊತ್ತಾ..?

ಇವತ್ತು ಬಿಬಿಎಂಪಿ ಮೇಯರ್ ಚುನಾವಣೆ ನಡೆದು ಬಿಜೆಪಿಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿದ್ದಾರೆ. ಆದ್ರೆ ಬಿಜೆಪಿ ಎರಡೆರಡು ನಾಮಪತ್ರ ಸಲ್ಲಿಕೆ ಮಾಡಿತ್ತು. ಗೌತಮ್ ಕುಮಾರ್ ಜೊತೆಗೆ ಪದ್ಮನಾಭರೆಡ್ಡಿ ಕೂಡ ನಾಮಪತ್ರ ಸಲ್ಲಿಸಿದ್ದರು. ನಂತರ ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿದ್ದರು. ಕಂದಾಯ ಸಚಿವ ಆರ್.ಅಶೋಕ್ ಈಗ ಎರಡೆರಡು ನಾಮಪತ್ರ ಸಲ್ಲಿಕೆ ಹಿಂದಿನ ರಹಸ್ಯವನ್ನು ತೆರೆದಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಗೊಂದಲದಲ್ಲಿ ಎರಡೆರಡು ನಾಮಪತ್ರ ಸಲ್ಲಿಕೆ ಮಾಡಿಲ್ಲ. ಇಬ್ಬರು ನಾಮಪತ್ರ ಸಲ್ಲಿಸುವಂತೆ ನಾನೇ ಹೇಳಿದ್ದೆ. ಯಾಕಂದ್ರೆ ಇದು ಚುನಾವಣೆ. ನಾಮಪತ್ರದಲ್ಲಿ ಏನಾದರೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ನಮ್ಮ ಪಕ್ಷದ ಅಭ್ಯರ್ಥಿ ಗೌತಮ್ ಕುಮಾರ್ ಎಂದು ಮೊದಲೇ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.

ನಾವು ಹಲವು ಸುತ್ತಿನ ಸಭೆ ಬಳಿಕ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದೇವೆ. ಆದ್ರೆ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಹಾಕಿ, ನಮ್ಮದೇ ಚೀಟಿ ಸಂಸ್ಕøತಿ ಅಂತ ಹೇಳಿದೆ. ನಮ್ಮಲ್ಲಿರುವ ಆಂತರಿಕ ಪ್ರಜಾಪ್ರಭುತ್ವ ಅವರ ಪಕ್ಷದಲ್ಲಿಲ್ಲ ಎಂದಿದ್ದಾರೆ.

Contact Us for Advertisement

Leave a Reply