ಯಡಿಯೂರಪ್ಪ ಫಸ್ಟ್ ಕ್ಲಾಸ್ ಆಗಿದ್ದಾರೆ: ಡಿಸಿಎಂ ಅಶ್ವತ್ಥ್ ನಾರಾಯಣ್

ಸಿಎಂ ಬಿ.ಎಸ್.ಯಡಿಯೂರಪ್ಪ ಫಸ್ಟ್ ಕ್ಲಾಸ್ ಆಗಿದ್ದಾರೆ ಅಂತ ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ತಂತಿಯ ಮೇಲೆ ನಡೆದಂತೆ ಆಗುತ್ತಿದೆ ಎಂದಿದ್ದ ಯಡಿಯೂರಪ್ಪ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಫಸ್ಟ್ ಕ್ಲಾಸ್ ಆಗಿದ್ದಾರೆ. ತಂತಿಯ ಮೇಲಿನ ನಡಿಗೆ ಅಂದ್ರೆ ಆರ್ಥಿಕ ಮುಗ್ಗಟ್ಟು, ಸಾಲ, ಪ್ರವಾಹದ ಸಂಕಷ್ಟ ಅಷ್ಟೆ. ಅದು ಬಿಟ್ಟು ರಾಜಕೀಯವಾಗಿ ಯಾವುದೇ ಅಸ್ಥಿರತೆ ಇಲ್ಲ. ನಾವು ನಮ್ಮ ಬಲದಲ್ಲಿಯೇ ಸರ್ಕಾರ ರಚನೆ ಮಾಡಿದ್ದೇವೆ. ಯಡಿಯೂರಪ್ಪನವರು ತುಂಬಾ ಆರಾಮಾಗಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ, ಜನರ ನಡುವೆ ಓಡಾಡುತ್ತಾ ಖುಷಿಯಾಗಿ ಇದ್ದಾರೆ ಅಂತ ಹೇಳಿದ್ದಾರೆ. ಅಲ್ಲದೆ ಪ್ರವಾಹದ ಪರಿಹಾರ ತಡವಾಗಿ ಬಂದರೂ ಅನಾನುಕೂಲವೇನೂ ಇಲ್ಲ. ರಾಜ್ಯದಲ್ಲಿ ಈಗಾಗಲೇ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತಿದೆ ಅಂತಲೂ ಹೇಳಿದ್ದಾರೆ.

Contact Us for Advertisement

Leave a Reply