ಪ್ರವಾಹಕ್ಕೆ ನಕ್ಷತ್ರ ಕಾರಣ: ಬಿಜೆಪಿ ಸಂಸದನ ವಿವಾದಿತ ಮಾತು

ಬಿಹಾರದಲ್ಲಿ ಪ್ರವಾಹ ಉಂಟಾಗಿ ಜನ ಪರದಾಡುತ್ತಿದ್ದಾರೆ. ಈ ನಡುವೆ ಪ್ರವಾಹಕ್ಕೆ ನಕ್ಷತ್ರವೇ ಕಾರಣ ಅಂತ ಕೇಂದ್ರ ಸಚಿವ ಅಶ್ವಿನಿ ಚೌಬೆ ಹೇಳಿದ್ದಾರೆ. ಅಲ್ಲದೆ ಇದಕ್ಕೆಲ್ಲಾ ವಿಪಕ್ಷದ ನಾಯಕರು ಮಾಡಿರೋ ಪಾಪಗಳೇ ಕಾರಣ ಎಂದಿದ್ದಾರೆ. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಮುಗಿಬಿದ್ದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಿಹಾರದಲ್ಲಿ ಕಳೆದ 15 ವರ್ಷಗಳಿಂದ ಮೇಯರ್, ಐವರು ಸಂಸದರು, ಶಾಸಕರು ಎಲ್ಲರೂ ಬಿಜೆಪಿಯವರೇ ಇದ್ದಾರೆ. 15 ವರ್ಷಗಳಿಂದ ಬಿಹಾರದಲ್ಲಿ ಎನ್‍ಡಿಎ ಸರ್ಕಾರ ಇದೆ. ಈ 15 ವರ್ಷಗಳ ದುರಾಳಿತಕ್ಕೆ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ಸುಶೀಲ್ ಕುಮಾರ್ ಮೋದಿಯವರು ಮೊಘಲರು, ನೆಹರು, ಲಾಲೂ, ವಾತಾವರಣ, ಪ್ರಕೃತಿ, ನಕ್ಷತ್ರವನ್ನು ದೂಷಿಸಲೇಬೇಕಲ್ವಾ ಎಂದು ಹೇಳಿದ್ದಾರೆ.

Contact Us for Advertisement

Leave a Reply