ಅಶ್ವಿನಿ ಪುನೀತ್ ರಾಜ್​ಕುಮಾರ್ ತಂದೆ ನಿಧನ, ನೇತ್ರದಾನ

masthmagaa.com:

ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿಗೆ ಮತ್ತೊಂದು ಆಘಾತವಾಗಿದೆ. ಪತಿಯನ್ನು ಕಳೆದುಕೊಂಡ 3 ತಿಂಗಳ ಬಳಿಕ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. 78 ವರ್ಷ ವಯಸ್ಸಾಗಿದ್ದ ರೇವನಾಥ್ ಹೃದಯಾಘಾತಕ್ಕೆ ಒಳಗಾಗಿ ಎಂಎಸ್​ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ 20 ವರ್ಷಗಳ ಹಿಂದೆಯೇ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಪುನೀತ್ ರಾಜ್​ಕುಮಾರ್ ನಿಧನದ ಬಳಿಕ ತುಂಬಾ ಒತ್ತಡಕ್ಕೆ ಒಳಗಾಗಿದ್ರು ಅಂತ ಸಂಬಂಧಿಕರು ಮಾಹಿತಿ ನೀಡಿದ್ದಾರೆ.. ಇವರ ನೇತ್ರದಾನ ಮಾಡುವ ಮೂಲಕ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ.

-masthmagaa.com

Contact Us for Advertisement

Leave a Reply