ಅಸ್ಸಾಂನಲ್ಲಿ ಬಾಲ್ಯ ವಿವಾಹ ವಿರುದ್ಧ ಕಠಿಣ ಕ್ರಮವನ್ನ ಟೀಕಿಸಿದ ಓವೈಸಿ! ಹೇಳಿದ್ದೇನು?

masthmagaa.com:

ಬಾಲ್ಯವಿವಾಹದ ವಿರುದ್ಧ ಅಸ್ಸಾಂ ಕೈಗೊಂಡಿರೋ ಕಠಿಣ ಕ್ರಮವನ್ನ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ. ಸರ್ಕಾರ ತೆಗೆದುಕೊಂಡಿರೋ ನಿರ್ಧಾರ ದ್ವೇಷದಿಂದ ಕೂಡಿದೆ. ಕಳೆದ 6 ವರ್ಷದಿಂದ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಇದೆ. ಇಷ್ಟು ವರ್ಷ ಏನು ಮಾಡ್ತಿದ್ರಿ. ಬಾಲ್ಯ ವಿವಾಹ ನಿಷೇಧ ಕಾಯಿದೆಯನ್ನ 2006ರಲ್ಲೇ ಪಾಸ್‌ ಮಾಡಲಾಗಿದೆ. ಆದ್ರೆ ಸರ್ಕಾರ ಬಾಲ್ಯ ವಿವಾಹವನ್ನ ತಡೆಯುವಲ್ಲಿ ವಿಫಲವಾಗಿದೆ. ಇದೀಗ ಗಂಡಂದಿರನ್ನ ಅರೆಸ್ಟ್‌ ಮಾಡಿದ್ರೆ ಆ ಹೆಣ್ಣು ಮಕ್ಕಳ ಗತಿಯೇನು? ಅವ್ರನ್ನ ಯಾರು ನೋಡಿಕೊಳ್ತಾರೆ ಅಂತ ಓವೈಸಿ ಪ್ರಶ್ನಿಸಿದ್ದಾರೆ. ಜೊತೆಗೆ ಬಾಲ್ಯ ವಿವಾಹವನ್ನ ಕಂಟ್ರೋಲ್‌ ಮಾಡೋಕೆ ಶಾಲೆಗಳನ್ನ ತೆರೆಯಬೇಕು. ಸರ್ಕಾರ ಅದನ್ನೂ ಮಾಡಿಲ್ಲ ಅಷ್ಟೆ ಅಲ್ದೆ ಶಿಕ್ಷಣ ನೀಡ್ತಿದ್ದ ಮದರಸಾಗಳನ್ನ ಮುಚ್ಚಿಸಿದೆ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕೋಕೆ ಮುಂದಾಗಿರೋ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸರ್ಮ, ಆರೋಪಿಗಳನ್ನ ಬಂಧಿಸೋ ಈ ಆಂದೋಲನ ಮುಂದಿನ 2026ರ ವಿಧಾನಸಭಾ ಚುನಾವಣೆವರೆಗೆ ಮುಂದುವರೆಯುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply