masthmagaa.com:

ಭಾರಿ ನಿರೀಕ್ಷೆ ಮೂಡಿಸಿರುವ ಆಕ್ಸ್​ಫರ್ಡ್-ಆಸ್ಟ್ರಾಝೆನೆಕಾ​ ಲಸಿಕೆ ಈಗ ಹೊಸದಾಗಿ ಮತ್ತು ಹೆಚ್ಚುವರಿಯಾಗಿ ಜಾಗತಿಕ ಪ್ರಯೋಗ ನಡೆಸಲು ಮುಂದಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಕಂಪನಿ ಬಿಡುಗಡೆ ಮಾಡಿದ ಲಸಿಕೆ ಪರಿಣಾಮಕತ್ವದ ರಿಸಲ್ಟ್. ಇದರಲ್ಲಿ ಅರ್ಧ ಡೋಸ್ ಪಡೆದ ಸ್ವಯಂಸೇವಕರಲ್ಲಿ ಲಸಿಕೆಯು 90 ಪರ್ಸೆಂಟ್ ಎಫೆಕ್ಟಿವ್ ಆಗಿದ್ರೆ, ಪೂರ್ತಿ ಡೋಸ್​ ಪಡೆದವರಲ್ಲಿ 62 ಪರ್ಸೆಂಟ್ ಎಫೆಕ್ಟಿವ್ ಅಂತ ಕಂಪನಿ ಘೋಷಿಸಿಕೊಂಡಿತ್ತು. ಎರಡನ್ನೂ ಸೇರಿ 70.4% ಪರಿಣಾಮಕಾರಿ ಅಂತ ಹೇಳಿತ್ತು. ಅಂದ್ರೆ ಪೂರ್ತಿ ಡೋಸ್​ಗಿಂತ ಅರ್ಧ ಡೋಸ್​ ಉತ್ತಮವಾಗಿ ಕೆಲಸ ಮಾಡಿದೆ ಅಂತ ಅರ್ಥ. ಇದೇ ಈಗ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಅರ್ಧ ಡೋಸ್​ ಲಸಿಕೆಯ ಎಫೆಕ್ಟಿವ್​ನೆಸ್​ ಪರೀಕ್ಷೆ ನಡೆಸಲು ಹೊಸದಾಗಿ ಪ್ರಯೋಗ ನಡೆಸಲಾಗುತ್ತೆ ಅಂತ ಆಸ್ಟ್ರಾಝೆನೆಕಾ ಸಿಇಒ ಪ್ಯಾಸ್ಕಲ್ ಸಾರಿಯಟ್ ಹೇಳಿದ್ದಾರೆ. ನಮ್ಮ ಬಳಿ ಈಗಾಗಲೇ ಅಂಕಿ ಅಂಶಗಳು ಇರೋದ್ರಿಂದ ಹೊಸ ಪ್ರಯೋಗಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಜೊತೆಗೆ ಲಸಿಕೆ ಅನುಮೋದನೆಗೆ ವಿಳಂಬ ಕೂಡ ಆಗುವುದಿಲ್ಲ ಅಂತ ಭಾವಿಸಿದ್ದೇವೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply