ನೈಜೀರಿಯಾ: ಅಪ್ಪಿತಪ್ಪಿ ನಡೆದ ಸೇನಾ ಡ್ರೋನ್‌ ದಾಳಿಗೆ ಕನಿಷ್ಠ 85 ಮಂದಿ ಸಾವು

masthmagaa.com:

ಅಪ್ಪಿತಪ್ಪಿ ಮಿಲಿಟರಿ ಡ್ರೋನ್‌ ಒಂದು ನಡೆಸಿರೋ ದಾಳಿಯಲ್ಲಿ ಕನಿಷ್ಠ 85 ಮಂದಿ ಸಾವನ್ನಪ್ಪಿರೋ ಘಟನೆ ನೈಜೀರಿಯಾದಲ್ಲಿ ನಡೆದಿದೆ. ಸಶಸ್ತ್ರ ಗುಂಪಿನ ಮೇಲೆ ದಾಳಿ ನಡೆಸೋಕೆ ಹೋದಾಗ ಮಿಸ್ಟೇಕಾಗಿ, ಮಿಲಿಟರಿ ಡ್ರೋನ್‌ ಒಂದು ಹಳ್ಳಿಯೊಂದ್ರಲ್ಲಿ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ದಾಳಿ ಮಾಡಿದೆ ಅಂತ ಅಲ್ಲಿನ ಸೇನಾಧಿಕಾರಿ ಹೇಳಿದ್ದಾರೆ. ಈ ದಾಳಿಗೆ ಕನಿಷ್ಠ 85 ಮಂದಿ ಬಲಿಯಾಗಿದ್ದು, 66 ಮಂದಿ ಗಾಯಗೊಂಡಿದ್ದಾರೆ ಅಂತ ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಸೋಕೆ ನೈಜೀರಿಯಾ ಅಧ್ಯಕ್ಷ ಆದೇಶಿಸಿದ್ದಾರೆ. ಆದ್ರೆ ನೈಜೀರಿಯಾದ ಈ ಸಂಘರ್ಷ ಪ್ರದೇಶಗಳಲ್ಲಿ ಈ ರೀತಿ ಮಿಸ್ಟೇಕ್‌ ದಾಳಿಯಾಗೋದು ಸಾಮಾನ್ಯವಾಗಿಬಿಟ್ಟಿದೆ. ಅಂತರಾಷ್ಟ್ರೀಯ ಭದ್ರತಾ ಸಂಸ್ಥೆಯೊಂದ್ರ ವರದಿ ಪ್ರಕಾರ ನೈಜೀರಿಯಾದಲ್ಲಿ 2017ರಿಂದ ಈ ರೀತಿ ಏರ್‌ಸ್ಟ್ರೈಕ್‌ನಲ್ಲಿ ಸುಮಾರು 400 ಜನ ಸಾರ್ವಜನಿಕರು ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply