ನಾವು ನೆರೆಹೊರೆಯವರ ಮೇಲೆ ಯುದ್ಧ ಮಾಡುವುದಿಲ್ಲ: ತಾಲಿಬಾನ್‌

masthmagaa.com:

ಇರಾನ್‌ ಹಾಗೂ ಅಫ್ಘಾನಿಸ್ತಾನದ ಗಡಿಯಲ್ಲಿ ಪರಸ್ಪರ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ 3 ಜನ ಸೈನಿಕರು ಮೃತಪಟ್ಟಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇರಾನ್‌ನ ಇಬ್ಬರು ಸೈನಿಕರು ಹಾಗೂ ಅಫ್ಘಾನಿಸ್ತಾನದ ಓರ್ವ ತಾಲಿಬಾನ್‌ ಕಾವಲುಗಾರ ಮೃತಪಟ್ಟಿದ್ದಾರೆ. ನಿಮ್ರೋಜ್‌ ಪ್ರಾಂತ್ಯದಲ್ಲಿ ಇರಾನ್ ಗಡಿ ಪಡೆಗಳು ಅಫ್ಘಾನಿಸ್ತಾನದ ಕಡೆಗೆ ಗುಂಡು ಹಾರಿಸಿದ್ದು, ಅದನ್ನ ಸಮರ್ಥವಾಗಿ ಎದುರಿಸಲಾಯಿತು ಅಂತ ಅಫ್ಘಾನಿಸ್ತಾನ ಇಂಟೀರಿಯರ್‌ ಸಚಿವಾಲಯದ ವಕ್ತಾರ ಅಬ್ದುಲ್‌ ನಫಿ ಟಾಕೋರ್‌ ತಿಳಿಸಿದ್ದಾರೆ. ಅಂದ್ಹಾಗೆ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಅಲ್ದೆ ಅಫ್ಘಾನಿಸ್ತಾನ ತನ್ನ ನೆರೆಹೊರೆಯವರ ಜೊತೆಯಲ್ಲಿ ಯುದ್ಧ ಮಾಡಲು ಬಯಸುವುದಿಲ್ಲ ಅಂತ ಅಬ್ದುಲ್‌ ನಫಿ ಹೇಳಿದ್ದಾರೆ. ಇದೇ ವೇಳೆ ಅಫ್ಘಾನಿಸ್ತಾನ ಯಾವುದೇ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲು ಮಾತುಕತೆ ಅಥ್ವಾ ಸಂಧಾನವನ್ನ ಸರಿಯಾದ ಮಾರ್ಗ ಅಂತ ಪರಿಗಣಿಸುತ್ತೆ. ಹೀಗಾಗಿ ಯುದ್ಧ ಹಾಗೂ ನೆಗೆಟಿವ್‌ ಕ್ರಮಗಳಿಗೆ ಪ್ರಾಮುಖ್ಯತೆ ನೀಡೋದಿಲ್ಲ ಅಂತ ತಾಲಿಬಾನ್‌ ಡಿಫೆನ್ಸ್‌ ಸಚಿವಾಲಯದ ವಕ್ತಾರ ಎನಾಯುತುಲ್ಲಾ ಖೊವರಾಜ್ಮಿ ಹೇಳಿದ್ದಾರೆ. ಅಂದ್ಹಾಗೆ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಉದ್ವಿಗ್ನತೆ ತೀವ್ರಗೊಳ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply