ಕೋವಿಡ್‌ ಲಸಿಕೆ ರೀತಿ ಗೋಧಿ ಕೂಡ ಉಳ್ಳವರ ಪಾಲಾಗ್ಬಾರ್ದು: ಭಾರತ

masthmagaa.com:

ಗೋಧಿ ರಫ್ತು ನಿಗ್ರಹಿಸ್ತಾ ಇರೋದಕ್ಕೆ ಕಿಡಿಕಾರ್ತಿರೋ ದೇಶಗಳಿಗೆ ಭಾರತ ತಿರುಗೇಟು ನೀಡಿದೆ. ಕೋವಿಡ್‌ ಲಸಿಕೆ ರೀತಿ ಇದು ಕೂಡ ಉಳ್ಳವರ ಪಾಲಾಗ್ಬಾರ್ದು ಅಂತ ಈ ರೀತಿ ಮಾಡಲಾಗಿದೆ ಎಂದು ರಾಜ್ಯ ವಿದೇಶಾಂಗ ಸಚಿವ ವಿ ಮುರಳೀಧರನ್‌ ಪಾಶ್ಚೀಮಾತ್ಯ ದೇಶಗಳಿಗೆ ಟೀಕಿಸಿದ್ದಾರೆ. ಆಹಾರ ಧಾನ್ಯಗಳನ್ನ ಹಿಡಿದಿಟ್ಕೊಂಡು ಕೃತಕ ಅಭಾವ ಸೃಷ್ಟಿ ಮಾಡಲಾಗ್ತಾ ಇತ್ತು. ಇದ್ರಿಂದ ಆಹಾರ ಬೆಲೆ ಗಗನಕ್ಕೇ ಏರ್ತಾ ಇದೆ. ಜೊತೆಗೆ ಗೋಧಿಯನ್ನ ಸಮರ್ಪಕವಾಗಿ ಪೂರೈಕೆ ಮಾಡ್ತಾ ಇರ್ಲಿಲ್ಲ. ಇದ್ರಲ್ಲೂ ಕೂಡ ತಾರತಮ್ಯ ಮಾಡಲಾಗ್ತಾ ಇತ್ತು. ಕೋವಿಡ್‌ ಸಮಯದಲ್ಲಿ ಬಡ ದೇಶಗಳು ಕೋವಿಡ್‌ ಲಸಿಕೆಗೆ ಪರದಾಡ್ತಾ ಇದ್ರೆ ಶ್ರೀಮಂತ ದೇಶಗಳು ತಮ್ಗೆ ಅವಶ್ಯಕತೆಗಿಂತ ಜಾಸ್ತಿನೇ ಲಸಿಕೆ ಇಟ್ಕೊಂಡಿದ್ವು. ಆಹಾರ ಧಾನ್ಯಗಳ ವಿಚಾರದಲ್ಲೂ ಕೂಡ ಹೀಗಾಗಬಾರ್ದು ಅಂತ ನಾವು ಅದ್ರ ರಫ್ತನ್ನ ನಿಗ್ರಹಿಸ್ತಾ ಇದ್ದೇವೆ ಅಂತ Global Food Security Call to Action, ಅನ್ನೋ ಸಭೆಯಲ್ಲಿ ಹೇಳಿದ್ದಾರೆ. ಜೊತೆಗೆ ಭಾರತ ʻವಸುದೈವ ಕುಟುಂಬಕಂʼ ಮತ್ತು ನೆರೆಹೊರೆಯರು ಮೊದಲು ಅನ್ನೋ ನೀತಿ ಪಾಲಿಸುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply