ಪ್ರಧಾನಿ ಮೋದಿಗೂ ವಾಜಪೇಯಿಗೂ ಇದೇ ವ್ಯತ್ಯಾಸವಂತೆ..!

ಮುಂಬೈ: ಪ್ರಧಾನಿ ಮೋದಿ ವಿರುದ್ಧ ಎನ್​ಸಿಪಿ ನಾಯಕ ಶರದ್ ಪವಾರ್​​ ಮತ್ತೆ ಕೆಂಡಕಾರಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ತಮ್ಮ ನಿರ್ಧಾರಗಳ ಬಗ್ಗೆ ಖಚಿತಪಡಿಸಿಕೊಳ್ಳುತ್ತಿದ್ದರು. ಬೇರೆಯವರಿಗೆ ತೊಂದರೆಯಾಗದಂತೆ, ಕಹಿ ಅನುಭವವಾಗದಂತೆ ನೋಡಿಕೊಳ್ಳುತ್ತಿದ್ದರು. ಆದ್ರೆ ಪ್ರಧಾನಿ ಮೋದಿ ಕೆಲವೊಂದು ನಿರ್ಧಾರಗಳನ್ನು ನಿರ್ದಯವಾಗಿ, ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದಾರೆ ಅಂತ ಹೇಳಿದ್ರು.

ಪ್ರಧಾನಿ ಮೋದಿಯವರು ನಿರ್ದಯವಾಗಿ ತಮ್ಮ ನಿರ್ಧಾರಗಳನ್ನು ಜನರ ಮೇಲೆ ಹೇರುತ್ತಿದ್ದಾರೆ. ಆದ್ರೆ ವಾಜಪೇಯಿಯರು ಹೀಗೆ ಮಾಡುತ್ತಿರಲಿಲ್ಲ. ವಾಜಪೇಯಿ ಸುಸಂಸ್ಕೃತ ಸಂಭಾವಿತ ವ್ಯಕ್ತಿಯಾಗಿದ್ದರು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಯಾರಿಗೂ ಕಹಿ ಅನುಭವ ಆಗದಂತೆ ನೋಡಿಕೊಳ್ಳುತ್ತಿದ್ದರು. ಅದೇ ಕಾರಣಕ್ಕೆ ಅವರನ್ನು ಎಲ್ಲರಿಂದಲೂ ಗೌರವಕ್ಕೆ ಪಾತ್ರರಾಗಿದ್ದರು ಅಂತ ಶರದ್ ಪವಾರ್​​ ಹೇಳಿದ್ದಾರೆ.

 

 

Contact Us for Advertisement

Leave a Reply