ಭಾರತದಲ್ಲಿ ಅಲ್ಪಾಸಂಖ್ಯಾತರ ಮೇಲೆ ದಬ್ಬಾಳಿಕೆ! ಮತ್ತೆ ನಾಲಗೆ ಹರಿಬಿಟ್ಟ ಅಮೆರಿಕ!

masthmagaa.com:

ತನ್ನ ದೇಶದಲ್ಲೇ ಗಲಭೆ, ಶೂಟೌಟ್‌ ಅಂತ ಮಕ್ಕಳು, ನಾಗರೀಕರೆಲ್ಲರೂ ಬೀದಿಯಲ್ಲಿ ಹೆಣವಾಗ್ತಿದ್ರೆ ಅಮೆರಿಕ ಮಾತ್ರ ಬೇರೆ ದೇಶಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡೋದನ್ನ ಮಾತ್ರ ನಿಲ್ಸೋದಿಲ್ಲ. ಈಗ ಅದೇ ಚಾಳಿ ಮುಂದುವರೆದೆದ್ದು ಭಾರತದಲ್ಲಿ ಅಲ್ಪಾಸಂಖ್ಯಾತರ ಹಕ್ಕುಗಳ ದಮನ ಆಗ್ತಿದೆ ಅಂತ ಆರೋಪಿಸಿದೆ. ಅಮೆರಿಕದ ಸ್ಟೇಟ್‌ ಡಿಪಾರ್ಟ್ಮೆಂಟ್‌ ಅಲ್ಲಿನ ಸಂಸತ್‌ಗೆ ವರದಿಯೊಂದನ್ನ ನೀಡಿದ್ದು ಅದರಲ್ಲಿ 2021ರ ಅಂತರಾಷ್ಟೀಯ ಧಾರ್ಮಿಕ ಸ್ವಾತಂತ್ರದ ಕುರಿತು ಮಾಹಿತಿ ನೀಡಿದೆಯಂತೆ. ಇದನ್ನ ಅಲ್ಲಿನ ಸೆಕ್ರೆಟ್ರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಅದರ ಪ್ರಕಾರ 2021ರಲ್ಲಿ ಭಾರತದಲ್ಲಿರುವ ಅಲ್ಪಾಸಂಖ್ಯಾರತರ ಮೇಲೆ ದಬ್ಬಾಳಿಕೆ, ಒತ್ತಾಯ, ಹತ್ಯೆ, ಹೀಗೆ ಎಲ್ಲಾ ರೀತಿಯ ಶೋಷಣೆ ಮಾಡಲಾಗಿದೆ. ಪ್ರಮುಖವಾಗಿ ಗೋ ಹತ್ಯೆ ನಿಷೇಧದ ವಿವಾದದಲ್ಲಿ ಹಿಂದೂಯೇತರರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ ಅಂತ ಹೇಳಿದೆ.
ಅಲ್ಲ.. ಜಗತ್ತಿನ ಎಲ್ಲರ ಮುಖವನ್ನ ಸುಖಾಸುಮ್ಮನೇ ಜರಿದು ಹರಾಜಿಗಿಡೋ ಅಮೆರಿಕ ತನ್ನ ಮುಖವನ್ನ ಮಾತ್ರ ಕನ್ನಡಿಗೆ ತೋರಿಸೋದಿಲ್ಲ. ಆತ್ಮವಿಮರ್ಶೆ ಮಾಡಿಕೊಳ್ಳೊದಿಲ್ಲ. ಉದಾಹರಣೆಗೆ ಜಗತ್ತೆಲ್ಲಾ ವರ್ಣಭೇದ ನೀತಿಯಿಂದ ಭಾಗಶಃ ಮುಕ್ತವಾಗಿದ್ರು ಕೂಡ ಅಮೆರಿಕದಲ್ಲಿ ಮಾತ್ರ ಇದು ಇನ್ನು ಜೀವಂತವಾಗಿದೆ, ಜೀವ ತೆಗೀತಿದೆ. ಈ ಬಗ್ಗೆ ಅವರು ಮಾತಾಡೋದೆ ಇಲ್ಲ. ಬೇರೆ ದೇಶದ ಆಂತರಿಕ ವಿಷಯದಲ್ಲಿ ಮೂಗೂ ತೂರ್ಸೋದನ್ನ. ಅಲ್ಲಿರೋ ಜನರ ಮೇಲಿನ ಅತಿಯಾದ ಕಾಳಜಿಯನ್ನ ಕಡಿಮೆ ಮಾಡಿ ಅದನ್ನ ತಮ್ಮ ಜನರ ಮೇಲೆಯೇ ತೋರ್ಸುದ್ರೆ. ಕಪ್ಪುವರ್ಣೀಯರ ಮೇಲೆ ಆಗ್ತಿರೋ ದೌರ್ಜನ್ಯಗಳು ಕೊಲೆಗಳು ಬಹುಶಃ ಕಡಿಮೆ ಆಗಬಹುದು ಅಂತ ಅನ್ಸುತ್ತೆ.

-masthmagaa.com

Contact Us for Advertisement

Leave a Reply