masthmagaa.com: ಮಯನ್ಮಾರ್​​ನ ಸೇನಾ ಕ್ಷಿಪ್ರಕ್ರಾಂತಿ ಜೊತೆ ಲಿಂಕ್ ಹೊಂದಿರೋ ಮತ್ತೆ 10 ವ್ಯಕ್ತಿಗಳು ಮತ್ತು ಮಯನ್ಮಾರ್​ ಸೇನೆ ನಡೆಸುತ್ತಿರುವ 2 ವ್ಯವಹಾರಗಳ ಮೇಲೆ ಸ್ಯಾಂಕ್ಷನ್ಸ್ ಹೇರಲು ಯುರೋಪಿಯನ್ ಯೂನಿಯನ್ ಒಪ್ಪಿಗೆ ನೀಡಿದೆ. ಒಂದು Myanma Economic Holdings Limited (MEHL).. ಮತ್ತೊಂದು Myanmar Economic Corporation (MEC).. ಇವೆರಡನ್ನ ಮಯನ್ಮಾರ್ ಸೇನೆ ಮುನ್ನಡೆಸುತ್ತಿರೋದು. ಹೀಗಾಗಿ ಈ ಎರಡು ಸಂಘಸಂಸ್ಥೆಗಳ ಜೊತೆ ಯುರೋಪಿಯನ್ ಒಕ್ಕೂಟದ ಹೂಡಿಕೆದಾರರು ಮತ್ತು ಬ್ಯಾಂಕ್​ಗಳು ಯಾವುದೇ ವ್ಯವಹಾರ ನಡೆಸುವಂತಿಲ್ಲ. ಕಳೆದ ತಿಂಗಳು ಕೂಡ ಕ್ಷಿಪ್ರ ಕ್ರಾಂತಿ ಜೊತೆ ಲಿಂಕ್​ ಹೊಂದಿದ್ದ 11 ಜನರ ಮೇಲೆ ಯುರೋಪಿಯನ್ ಒಕ್ಕೂಟ ಸ್ಯಾಂಕ್ಷನ್ಸ್ ಹೇರಿತ್ತು. ಇದೆಲ್ಲದರ ನಡುವೆ ದಕ್ಷಿಣ ಕೊರಿಯಾದ POSCO Coated & Color Steel Co Ltd ಕೂಡ Myanma Economic Holdings Limited ತನ್ನ ವ್ಯವಹಾರ ಅಂತ್ಯಗೊಳಿಸೋದಾಗಿ ಘೋಷಿಸಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಮಯನ್ಮಾರ್​ನಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ ಎಲ್ಲವನ್ನ ತನ್ನ ಕಂಟ್ರೋಲ್​​ಗೆ ತೆಗೆದುಕೊಂಡಿರೋ ಮಯನ್ಮಾರ್ ಸೇನೆ ವಿರುದ್ಧ ಪ್ರತಿಭಟನೆ ಮುಂದುವರಿದಿದೆ. ಇಷ್ಟುದಿನ ರಸ್ತೆಗಿಳಿದು ಘೋಷಣೆಗಳನ್ನ ಕೂಗಿ ಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಜಾಪ್ರಭುತ್ವ ಪರ ಹೋರಾಟಗಾರರು, ಇವತ್ತು ಮೌನ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಫೆಬ್ರವರಿ 1ರಿಂದ ನಡೆಯುತ್ತಿರೋ ಪ್ರತಿಭಟನೆಯಲ್ಲಿ ಇದುವರೆಗೆ 700ಕ್ಕೂ ಹೆಚ್ಚು ಜನರನ್ನ ಸೇನೆ ಕೊಂದು ಹಾಕಿದೆ. ಹೀಗಾಗಿ ಶೋಕಾಚರಣೆಗಾಗಿ ಎಲ್ಲರೂ ಮನೆಯಲ್ಲೇ ಇರಿ ಅಂತ ಪ್ರತಿಭಟನಾಕಾರರು ಕರೆ ಕೊಟ್ಟಿದ್ದಾರೆ. ಒಂದ್ವೇಳೆ ಮನೆಯಿಂದ ಹೊರಬರಬೇಕು ಅಂದ್ರೆ ಕಪ್ಪು ಬಟ್ಟೆಯನ್ನ ತೊಟ್ಟು ಬನ್ನಿ ಅಂತಾನೂ ಆಗ್ರಹಿಸಿದ್ದಾರೆ. ರಸ್ತೆಗಳನ್ನ ಸೈಲೆಂಟ್​ ಆಗಿರಿಸೋಣ, ದಿ ಮೋಸ್ಟ್​ ಸೈಲೆಂಟ್ ವಾಯ್ಸ್ ಈಸ್ ದಿ ಲೌಡೆಸ್ಟ್ ಅಂತೆಲ್ಲಾ ಪ್ರತಿಭಟನೆಯ ನೇತೃತ್ವ ವಹಿಸಿರುವ ನಾಯಕರು ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಚೀನಾದ ವಿಶೇಷ ಆಡಳಿತ ಪ್ರದೇಶ ಎನಿಸಿಕೊಂಡಿರೋ ಹಾಂಗ್​ ಕಾಂಗ್​ನಲ್ಲಿ 2019ರಲ್ಲಿ ಸರ್ಕಾರದ ವಿರುದ್ಧ, ಪ್ರಜಾಪ್ರಭುತ್ವ ಪರವಾಗಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಚೀನಾ ಹಿಡಿತದಿಂದ ಮುಕ್ತವಾಗಿ ಸ್ವತಂತ್ರ ದೇಶವಾಗುವ ಉದ್ದೇಶ ಪ್ರತಿಭಟನಾಕಾರರದ್ದು ಆಗಿತ್ತು. ಹೀಗೆ ಪ್ರತಿಭಟನೆಯಲ್ಲಿ ಭಾಗವಹಿಸಿ, ಜನರನ್ನ ಸೇರಿಸಿದ ಆರೋಪದಲ್ಲಿ ಹಾಂಗ್​ ಕಾಂಗ್​ನ ಮೀಡಿಯಾ ಟೈಕೂನ್ ಎನಿಸಿಕೊಂಡಿರೋ ಜಿಮ್ಮಿ ಲೈ ಮತ್ತು ಇತರ 9 ಜನ ತಪ್ಪಿತಸ್ಥರು ಅಂತ ಈ ಹಿಂದೆ ಕೋರ್ಟ್ ತೀರ್ಪು ನೀಡಿತ್ತು. ಇವತ್ತು ಅವರಿಗೆಲ್ಲಾ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಅಂದ್ಹಾಗೆ ಜಿಮ್ಮಿ ಲೈ ಕಳೆದ ವರ್ಷದ ಡಿಸೆಂಬರ್​ನಿಂದಲೂ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಗಳು ತಿರಸ್ಕೃತಗೊಳ್ಳುತ್ತಾ ಬಂದಿವೆ. ಇದೀಗ ಅವರು ಮತ್ತು ಇತರ 9 ಜನರಿಗೆ ಶಿಕ್ಷೆ ಪ್ರಕಟವಾಗಲಿದೆ. ಗರಿಷ್ಟ ಶಿಕ್ಷೆಯ ಪ್ರಮಾಣ 5 ವರ್ಷ ಜೈಲು ಶಿಕ್ಷೆ ಅಂತ ಹೇಳಲಾಗ್ತಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದ GDP (ಒಟ್ಟು ದೇಶೀಯ ಉತ್ಪನ್ನ) ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2020ರ ಮೊದಲ ತ್ರೈ ಮಾಸಿಕಕ್ಕಿಂತ 2021ರ ಮೊದಲ ತ್ರೈ ಮಾಸಿಕದಲ್ಲಿ ಚೀನಾದ ಜಿಡಿಪಿ 18.3 ಪರ್ಸೆಂಟ್​ನಷ್ಟು ಏರಿಕೆ ಕಂಡಿದೆ. ಚೀನಾ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳಲ್ಲಿ ಇದು ಗೊತ್ತಾಗಿದೆ. ಚೀನಾದಲ್ಲಿ ಕ್ವಾರ್ಟರ್ಲಿ, ಅಂದ್ರೆ ಮೂರು ತಿಂಗಳಿಗೊಮ್ಮೆ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದ್ದು 1992ರಲ್ಲಿ. ಅಲ್ಲಿಂದ ಇಲ್ಲಿವರೆಗೆ ದಾಖಲಾದ ಅತಿಹೆಚ್ಚು ಜಿಡಿಪಿ ಬೆಳವಣಿಗೆ ಇದಾಗಿದೆ. ಕಳೆದ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಚೀನಾದ ಜಿಡಿಪಿ ಮೈನಸ್ 6.8 ಪರ್ಸೆಂಟ್​ ಕುಸಿದಿತ್ತು. 1992ರ ಬಳಿಕ ಮೊದಲ ಬಾರಿಗೆ ಚೀನಾದ ಜಿಡಿಪಿ ಮೈನಸ್​ಗೆ ಹೋಗಿತ್ತು. ಇದಕ್ಕೆ ಕಾರಣ ಚೀನಾದಲ್ಲಿ ಆರ್ಭಟಿಸಿದ್ದ ಕೊರೋನಾ ಮಹಾಮಾರಿ. ಅದಾದ ಬಳಿಕ ಕೊರೋನಾ ಹಾವಳಿ ಕಮ್ಮಿಯಾಗ್ತಾ ಬಂದಂತೆ ಚೀನಾದ ಜಿಡಿಪಿ ಏರ್ತಾ ಹೋಯ್ತು.. 2020ರ 2ನೇ ತ್ರೈ ಮಾಸಿಕದಲ್ಲಿ 3.2 ಪರ್ಸೆಂಟ್​, 3ನೇ ತ್ರೈ ಮಾಸಿಕದಲ್ಲಿ 4.9 ಪರ್ಸೆಂಟ್​, 4ನೇ ತ್ರೈ ಮಾಸಿಕದಲ್ಲಿ 6.5Read More →

masthmagaa.com: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,17,353 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 1,185 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ 42 ಲಕ್ಷದ 91 ಸಾವಿರ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,74,308 ಆಗಿದೆ. ಕಳೆದ 24 ಗಂಟೆಗಳಲ್ಲಿ 1,18, 302 ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1 ಕೋಟಿ 25 ಲಕ್ಷದ 47 ಸಾವಿರ ದಾಟಿದೆ. ದೇಶದಲ್ಲಿ ಇನ್ನೂ ಕೂಡ 15 ಲಕ್ಷದ 69 ಸಾವಿರಕ್ಕು ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿ ಗುಣಮುಖ ಪ್ರಮಾಣ 87.80 ಪರ್ಸೆಂಟ್ ಇದ್ದು, ಸಾವಿನ ಪ್ರಮಾಣ 1.22 ಪರ್ಸೆಂಟ್ ಇದೆ. ಏಪ್ರೀಲ್‌ 15 ರಂದು 14.73 ಲಕ್ಷ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 26.34 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ದೇಶದಲ್ಲಿ ನಿನ್ನೆ 27.30 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದ್ದು, ಇದುವರೆಗೆ ಒಟ್ಟು 11.72 ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಿದಂತಾಗಿದೆ. -masthmagaa.com Share on:Read More →

masthmagaa.com: ಇಷ್ಟು ದಿನ ಮೋದಿ ವರ್ಸಸ್ ಮಮತಾ ಭೀಕರ ಯುದ್ಧ ನೋಡಿದ್ದ ಪಶ್ಚಿಮ ಬಂಗಾಳದಲ್ಲಿ ಒವೈಸಿ ಹೊಸ ಆಟ ಹೂಡಿದ್ದಾರೆ. ಇಷ್ಟು ದಿನ ಬಿಜೆಪಿ ಟಿಎಮ್​ಸಿ ಪ್ರಚಾರದ ಅಬ್ಬರ ನೋಡಿದ್ದ ಮತದಾರರ ಮುಂದೆ ಒವೈಸಿ ಫುಲ್ ಟ್ವಿಸ್ಟ್​​ಗಳಿರೋ ಭಾಷಣ ಮಾಡಿದ್ದಾರೆ. ನೋಡಿ ಈ ಮೋದಿ – ಮಮತಾ ಅಣ್ಣ ತಂಗಿ ಇದ್ದ ಹಾಗೆ. ಒಂದೇ ನಾಣ್ಯದ ಎರಡು ಮುಖಗಳು ಇವ್ರು. ಜನ್ರನ್ನ ಬಕರಾ ಮಾಡೋಕೆ ಸುಮ್ಮನೆ ಜಗಳ ಆಡಿದ ಹಾಗೆ ಆಡ್ತಾರೆ ಅಷ್ಟೆ ಅಂದಿದ್ದಾರೆ. ನಾನು ಚಾಲೆಂಜ್ ಮಾಡ್ತೀನಿ. ಕಳೆದ 10 ವರ್ಷಗಳಲ್ಲಿ ಮಮತಾ ಬಂಗಾಳ ಮುಸ್ಲಿಮರಿಗೆ ಏನು ಉಪಕಾರ ಮಾಡಿದ್ದಾರೆ ಹೇಳಲಿ ಅಂದಿದ್ದಾರೆ ಎಐಮಿಐಎಮ್​ ಪಕ್ಷದ ನಾಯಕ ಅಸಾದುದ್ದೀನ್​ ಒವೈಸಿ. ಈ ನಡುವೆ ಜಾರಿನಿರ್ದೇಶನಾಲಯ/ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್ ಒಬ್ಬ ಸಚಿವ ಮತ್ತು ಒಬ್ಬ ಹಿರಿಯ ಟಿಎಂಸಿ ನಾಯಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಐ-ಕೋರ್​​ ಹೆಸರಿನ ಮೋಸದ ಸ್ಕೀಮಿನ ಆರೋಪ ಸಂಬಂಧ ಈ ನೊಟಿಸ್​ ನೀಡಲಾಗಿದೆ. -masthmagaa.com   Share on: WhatsAppContact Us for AdvertisementRead More →

masthmagaa.com: ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಜೋರಾಗಿ ಎದ್ದಿರೋ ಹಿನ್ನೆಲೆ ಮಕ್ಕಳ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು CBSE 10ನೇ ತರಗತಿಯ ಬೋರ್ಡ್​ ಎಕ್ಸಾಂ ಅನ್ನ ರದ್ದು ಮಾಡಲಾಗಿದೆ. ಅವರ ರಿಸಲ್ಟ್ ಅನ್ನ ಇಂಟರ್​ನಲ್​ ಅಸೆಸ್​ಮೆಂಟ್ ಆಧಾರದ ಮೇಲೆ ನಿರ್ಧರಿಸಲಾಗುತ್ತೆ. ಯಾವುದಾದ್ರೂ ವಿದ್ಯಾರ್ಥಿಯ ಇಂಟರ್​ನಲ್ ಅಸೆಸ್​ಮೆಂಟ್​ ಚೆನ್ನಾಗಿ ಇಲ್ಲದಿದ್ರೆ ಅಂಥವರಿಗೆ ಕೊರೋನಾ ನಿಯಂತ್ರಣಕ್ಕೆ ಬಂದ ಮೇಲೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತೆ ಅಂತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. ಇನ್ನು ಮೇ 4ರಿಂದ ಆರಂಭವಾಗಬೇಕಿದ್ದ CBSE 12ನೇ ತರಗತಿ ಪರೀಕ್ಷೆಗಳನ್ನ ಮುಂದೂಡಲಾಗಿದೆ. 12ನೇ ತರಗತಿ ಪರೀಕ್ಷೆ ಬಗ್ಗೆ ಜೂನ್​ 1ನೇ ತಾರೀಖು ಮತ್ತೊಮ್ಮೆ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಲಾಗುತ್ತೆ ಅಂತ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಕೇಂದ್ರ ಶಿಕ್ಷಣ ಸಚಿವರು ಮತ್ತು ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಇನ್ನು CBSE 10ನೇ ತರಗತಿ ಎಕ್ಸಾಂ ರದ್ದಾದ ಬೆನ್ನಲ್ಲೇ SSLC ಪರೀಕ್ಷೆ ಕೂಡ ರದ್ದಾಗುತ್ತೆ, ಮುಂದೂಡಿಕೆಯಾಗುತ್ತೆ ಅನ್ನೋ ಊಹಾಪೋಹ ಎದ್ದಿದೆ. ಆದ್ರೆ SSLC ಪರೀಕ್ಷೆRead More →

masthmagaa.com: ರಾಜ್ಯದಲ್ಲಿ ಇಂದು 11,265 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 38 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10,94,912 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 13,046 ಆಗಿದೆ. ಇಂದು 4,364 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 9,96,367 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 85,480 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 506 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಇಂದು ಈ ಖಾಯಿಲೆಗೆ ಬಲಿಯಾದವರ ಮಾಹಿತಿ ನೋಡೋದಾದ್ರೆ ಬೆಂಗಳೂರು ನಗರ – 23 ಮೈಸೂರು – 5 ಕಲಬುರಗಿ – 3 ಧಾರವಾಡ – 3 ಬೀದರ್‌ – 2 ಬಳ್ಳಾರಿ – 1 ತುಮಕೂರು – 1   -masthmagaa.com Share on: WhatsAppContact Us for AdvertisementRead More →

masthmagaa.com: ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಒಂದೇ ಕಂಪನಿಯ ಕೊರೋನಾ ಲಸಿಕೆಯ ಎರಡು ಡೋಸ್​​ ಹಾಕಲಾಗ್ತಿದೆ. ಆದ್ರೆ ಒಂದು ಡೋಸ್​ ಒಂದು ಕಂಪನಿಯದ್ದು, ಮತ್ತೊಂದು ಡೋಸ್ ಮತ್ತೊಂದು ಕಂಪನಿಯದ್ದು ಹಾಕುವ ಬಗ್ಗೆ ಬ್ರಿಟನ್​ನಲ್ಲಿ ಅಧ್ಯಯನ, ಪ್ರಯೋಗ ನಡೀತಿದೆ. ಈ ಪ್ರಯೋಗವನ್ನ ಕಾಮ್​-ಕಾವ್ ಸ್ಟಡಿ ಅಂತ ಕರೀತಾರೆ. ಆಕ್ಸ್​ಫರ್ಡ್​ ಯುನಿವರ್ಸಿಟಿ ಇದರ ಪ್ರಯೋಗ ನಡೆಸ್ತಿದೆ. ಇದರಲ್ಲಿ ಆಕ್ಸ್​​ಫರ್ಡ್​-ಆಸ್ಟ್ರಾಝೆನೆಕಾ ಲಸಿಕೆಯನ್ನ ಮೊದಲ ಡೋಸ್ ಕೊಡಲಾಗುತ್ತೆ. ನಂತರ ಎರಡನೇ ಡೋಸ್​ ಅನ್ನ ಫೈಝರ್ ಕಂಪನಿಯದ್ದು ಕೊಡಲಾಗುತ್ತೆ. ಎರಡು ಲಸಿಕೆಯ ಮಿಶ್ರಣದಿಂದ ಹೆಚ್ಚು ರಕ್ಷಣೆ ಸಿಗುತ್ತಾ ಅನ್ನೋದನ್ನ ಪತ್ತೆಹಚ್ಚುವ ಪ್ರಯತ್ನ ಇದಾಗಿದೆ. ಇಂತಹ ಮಿಕ್ಸ್ ಅಂಡ್ ಮ್ಯಾಚ್​ಗೆ ಇದೀಗ ಮೊಡೆರ್ನಾ ಮತ್ತು ನೋವಾವಾಕ್ಸ್ ಕಂಪನಿಗಳ ಲಸಿಕೆಯನ್ನ ಕೂಡ ಸೇರಿಸಲಾಗಿದೆ. ಇದರ ಪ್ರಕಾರ ಆಸ್ಟ್ರಾಝೆನೆಕಾ ಅಥವಾ ಫೈಝರ್ ಲಸಿಕೆಯ ಮೊದಲ ಡೋಸ್ ಪಡೆಯುವ ಸ್ವಯಂಸೇವಕರಿಗೆ ಮೊಡೆರ್ನಾ ಅಥವಾ ನೋವಾವಾಕ್ಸ್​ ಕಂಪನಿಯ ಎರಡನೇ ಡೋಸ್ ಹಾಕಲಾಗುತ್ತೆ. -masthmagaa.com Share on: WhatsAppContact Us for AdvertisementRead More →

masthmagaa.com: ಕೊರೋನಾ ಲಸಿಕೆ ಪಡೆದ ಬಳಿಕ ಅದು ಎಷ್ಟು ದಿನ ನಮಗೆ ರಕ್ಷಣೆ ನೀಡುತ್ತೆ ಅನ್ನೋ ಪ್ರಶ್ನೆ ಸಾಕಷ್ಟು ಜನರಿಗೆ ಇರುತ್ತೆ. ಅಮೆರಿಕದ ಮೊಡೆರ್ನಾ ಕಂಪನಿಯ ಲಸಿಕೆ ಎರಡನೇ ಡೋಸ್​ ಹಾಕಿಸಿಕೊಂಡ 6 ತಿಂಗಳ ಬಳಿಕವೂ ರಕ್ಷಣೆ ನೀಡುತ್ತಿದೆ ಅಂತ ಕಂಪನಿ ಹೇಳಿಕೊಂಡಿದೆ. ಜೊತೆಗೆ ತನ್ನ ಲಸಿಕೆ ಈ ಹಿಂದೆ ಇದ್ದಂತೇ 90 ಪರ್ಸೆಂಟ್​ಗೂ ಹೆಚ್ಚು ಪರಿಣಾಮಕಾರಿ ಅಂತಾನೂ ಹೇಳಿದೆ. ಅಲ್ಲದೆ ರೂಪಾಂತರಿ ಕೊರೋನಾ ವೈರಾಣುವಿನಿಂದಲೂ ರಕ್ಷಣೆ ನೀಡಬಲ್ಲ ಲಸಿಕೆ ಬಗ್ಗೆ ಪರೀಕ್ಷೆ ನಡೆಸುತ್ತಿದ್ದೇವೆ ಅಂತ ಮೊಡೆರ್ನಾ ಕಂಪನಿ ಹೇಳಿದೆ. ಲಸಿಕೆ ಬಗ್ಗೆ ಮೊಡೆರ್ನಾ ಕಂಪನಿ ತನ್ನ ಹೂಡಿಕೆದಾರರಿಗೆ ಆಗಾಗ ಮಾಹಿತಿ ನೀಡ್ತಾ ಇರುತ್ತೆ. ಈ ವೇಳೆ ಈ ವಿಚಾರವನ್ನ ಹೇಳಿದೆ. -masthmagaa.com Share on: WhatsAppContact Us for AdvertisementRead More →