ಹಬ್ಬದ ಸೀಸನ್‍ನಲ್ಲೂ ಚೇತರಿಸದ ವಾಹನ ವ್ಯಾಪಾರ

ಕಳೆದೆರಡು ತಿಂಗಳಿಂದ ದೇಶದ ಅರ್ಥ ವ್ಯವಸ್ಥೆಯ ದುಸ್ಥಿತಿಯನ್ನು ದೂರ ಮಾಡಲು ಪ್ರಧಾನಿ ಮೋದಿ ಸರ್ಕಾರ ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಸರ್ಕಾರದ ಕಡೆಯಿಂದ ಕಾರ್ಪೊರೇಟ್ ಟ್ಯಾಕ್ಸ್ ಕೂಡ ಇಳಿಸಿದೆ. ಆದ್ರೆ ಇಷ್ಟೆಲ್ಲಾ ಮಾಡಿದ್ರೂ ಕೂಡ ಅರ್ಥವ್ಯವಸ್ಥೆ ಮಾತ್ರ ಚೇತರಿಸಿಕೊಳ್ಳುತ್ತಲೇ ಇಲ್ಲ. ಎಲ್ಲಾ ಬಿಟ್ಟು ಹಬ್ಬದ ಸೀಸನ್‍ನಲ್ಲೂ ವಾಹನಗಳ ಮಾರಾಟ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಲೆಕ್ಕಾಚಾರದ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಶೇ.23ರಷ್ಟು ಪ್ರಮಾಣದಲ್ಲಿ ದೇಶೀಯ ವಾಹನಗಳ ಮಾರಾಟ ಇಳಿಕೆಯಾಗಿದೆ. ಕಳೆದ ವರ್ಷ ಒಟ್ಟು 2,92,660 ಯುನಿಟ್ ಮಾರಾಟವಾಗಿದ್ರೆ, ಈ ವರ್ಷ 2,23,317 ಯುನಿಟ್ ಮಾರಾಟವಾಗಿದೆ. ಕಾರುಗಳ ಮಾರಾಟದಲ್ಲಿ ಶೇ.33.4ರಷ್ಟು ಕುಸಿತವಾಗಿದ್ರೆ, ಬೈಕ್‍ಗಳ ಮಾರಾಟದಲ್ಲಿ ಶೇ.23ರಷ್ಟು ಇಳಿಕೆಯಾಗಿದೆ.

Contact Us for Advertisement

Leave a Reply