BIG NEWS: 6 ರಾಜ್ಯಗಳ ಪೌಲ್ಟ್ರಿ ಪಕ್ಷಿಗಳಿಗೆ ಹಕ್ಕಿಜ್ವರ ಕನ್ಫರ್ಮ್​

masthmagaa.com:

ದೇಶದಲ್ಲಿ ಇದುವರೆಗೆ 6 ರಾಜ್ಯಗಳ ಪೌಲ್ಟ್ರಿ (ಆಹಾರಕ್ಕಾಗಿ ಸಾಕುವ) ಪಕ್ಷಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ ಅಂತ ಕೇಂದ್ರ ಪಶುಸಂಗೋಪನಾ ಸಚಿವಾಲಯ ತಿಳಿಸಿದೆ. ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಮತ್ತು ಛತ್ತೀಸ್​ಗಢ. ಉಳಿದಂತೆ 10 ರಾಜ್ಯದಲ್ಲಿ ಕಾಗೆ, ವಲಸೆ ಹಕ್ಕಿ ಮತ್ತು ಕಾಡು ಹಕ್ಕಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ – ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ್​, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ. ಈ ಎರಡೂ ಪಟ್ಟಿಯಲ್ಲಿ ಕರ್ನಾಟಕ ಇಲ್ಲ ಅನ್ನೋದು ಸಮಾಧಾನದ ವಿಚಾರ. ಎರಡೂ ಪಟ್ಟಿಯನ್ನ ನೋಡಿದ್ರೆ ಒಟ್ಟು 11 ರಾಜ್ಯಗಳಲ್ಲಿ ಹಕ್ಕಿಜ್ವರ ಕನ್ಫರ್ಮ್ ಆದಂತಾಗಿದೆ.

-masthmagaa.com

Contact Us for Advertisement

Leave a Reply