1992ರಲ್ಲಿ ಅಯೋಧ್ಯೆ ಹೇಗಿತ್ತೋ ಹಾಗೇ ಇರಬೇಕು: ಮುಸ್ಲಿಮರ ವಾದ

ದೆಹಲಿ: ಅಯೋಧ್ಯೆ ವಿಚಾರವಾಗಿ ಸುಪ್ರೀಂಕೋರ್ಟ್​​​ನಲ್ಲಿ ಅಂತಿಮ ಹಂತದ ವಿಚಾರಣೆ ನಡೆಯುತ್ತಿದೆ. 1992ರಲ್ಲಿ ಅಯೋಧ್ಯೆ ಹೇಗಿತ್ತೋ ಹಾಗೇ ಇರಬೇಕು. ಬಾಬರಿ ಮಸೀದಿ ಧ್ವಂಸವಾಗೋದಕ್ಕೂ ಮುನ್ನ ಹೇಗಿತ್ತೋ ಹಾಗೇ ಇರಬೇಕು ಎಂದು ಮುಸ್ಲಿಂ ಪರ ವಕೀಲರು ವಾದ ಮಂಡಿಸಿದ್ದಾರೆ.

ಮುಸ್ಲಿಂ ಪಕ್ಷದ ಪರವಾಗಿ ವಾದ ಮಂಡಿಸಿದ ವಕೀಲ ರಾಜೀವ್ ಧವನ್, ಶ್ರದ್ಧೆಯಿಂದ ಭೂಮಿ ಸಿಗುವುದಿಲ್ಲ. ಹಿಂದೂಗಳ ಪರ ವಕೀಲರು ಪದೇ ಪದೇ ಶ್ರದ್ಧೆ ಮತ್ತು ಪುರಾಣಗಳನ್ನು ಉಲ್ಲೇಖಿಸುತ್ತಿದ್ದಾರೆ. ಆದ್ರೆ ಸ್ಕಂದ ಪುರಾಣದಲ್ಲಿ ಎಲ್ಲೂ ಅಯೋಧ್ಯೆ ಭೂಮಿ ಬಗ್ಗೆ ಉಲ್ಲೇಖ ಇಲ್ಲ ಎಂದಿದ್ದಾರೆ. ಅಲ್ಲದೆ ಕೋರ್ಟ್​ ಕೂಡ ಮುಸ್ಲಿಂ ಪಕ್ಷದ ಬಳಿಯೇ ಪ್ರಶ್ನೆಗಳನ್ನು ಕೇಳುತ್ತಿದೆ. ಆದ್ರೆ ಹಿಂದೂ ಪಕ್ಷದ ಬಳಿ ಯಾವುದೇ ಪ್ರಶ್ನೆ ಕೇಳಲ್ಲ ಎಂದಿದ್ದಾರೆ.

ಸುಪ್ರೀಂಕೋರ್ಟ್​​ನಲ್ಲಿ ಅಯೋಧ್ಯೆ ಸಂಬಂಧಿತ ವಿಚಾರಣೆ ಇದೇ ಅಕ್ಟೋಬರ್ 17ರಂದು ಮುಗಿಯಲಿದೆ. ಹೀಗಾಗಿ ಮುಸ್ಲಿಂ ಪಕ್ಷದವರಿಗೆ ವಾದ ಮಂಡನೆಗೆ ಇವತ್ತು ಕಡೆಯ ಅವಕಾಶವಾಗಿದೆ. ನಾಳೆ ಮತ್ತು ನಾಡಿದ್ದು ಅಂದ್ರೆ 15-16ರಂದು ಹಿಂದೂಗಳ ಪರ ವಕೀಲರು ವಾದ ಮಂಡಿಸಲಿದ್ದಾರೆ.

Contact Us for Advertisement

Leave a Reply