ಅಯೋಧ್ಯೆ ವಿಚಾರಣೆಗೆ ಮತ್ತೆ ಹೊಸ ಡೆಡ್‍ಲೈನ್..!

ಅಯೋಧ್ಯೆ ವಿವಾದ ಕುರಿತ ವಿಚಾರಣೆಯನ್ನು ಅಕ್ಟೋಬರ್ 18ರೊಳಗೆ ಮುಗಿಸಬೇಕು ಎಂದು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಡೆಡ್ ಲೈನ್ ಕೊಟ್ಟಿದ್ದರು. ಆದ್ರೆ ಈಗ ಪುನಃ 1 ದಿನ ಕಡಿಮೆ ಮಾಡಿ ಅಕ್ಟೋಬರ್ 17ರೊಳಗೆ ವಿಚಾರಣೆ ಮುಗಿಸುವಂತೆ ಸೂಚಿಸಿದೆ.

ಅಯೋಧ್ಯೆ ವಿಚಾರಣೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠದಲ್ಲಿ ನಡೆಯುತ್ತಿದೆ. ನವೆಂಬರ್ 17ಕ್ಕೆ ಅವರ ಕಾರ್ಯಾವಧಿ ಅಂತ್ಯವಾಗಲಿದೆ. ಹೀಗಾಗಿ ಅ.17ರಂದು ವಿಚಾರಣೆ ಮುಗಿದರೆ, ನವೆಂಬರ್ 17ರವರೆಗೆ ತೀರ್ಪು ಪ್ರಕಟಿಸಲು 1 ತಿಂಗಳ ಕಾಲ ಟೈಂ ಸಿಗತ್ತೆ. ಹೀಗಾಗಿ ಅಕ್ಟೋಬರ್ 17ರೊಳಗೆ ವಿಚಾರಣೆ ಮುಗಿಸುವಂತೆ ಸೂಚಿಸಲಾಗಿದೆ.

ಮುಸ್ಲಿಂ ಪಕ್ಷದ ವಕೀಲರು ಇನ್ನೂ ಸ್ವಲ್ಪ ದಿನಗಳ ಕಾಲ ವಿಚಾರಣೆಗೆ ಮನವಿ ಮಾಡಿದ್ದಾರೆ. ಆದ್ರೆ ವಕೀಲರ ಮನವಿ ತಿರಸ್ಕರಿಸಿದ ನ್ಯಾಯಾಧೀಶರು ಬೇಕಾದ್ರೆ ಪ್ರತಿದಿನ ವಿಚಾರಣೆಯ ಅವಧಿಯನ್ನು 1 ಗಂಟೆ ಹೆಚ್ಚಿಸೋಣ. ಅಗತ್ಯವಿದ್ದರೆ ಶನಿವಾರ ಕೂಡ ವಿಚಾರಣೆ ನಡೆಸೋಣ ಅಂತ ಹೇಳಿದ್ದಾರೆ.

Contact Us for Advertisement

Leave a Reply