ಬಾಬೂಜಿ ನಿಧಾನ ನಡೀರಿ..ಕೇಜ್ರಿಗೆ ಗೌತಿ ಗುನ್ನ..!

ದೆಹಲಿಯ ರಸ್ತೆಗುಂಡಿ ವಿಚಾರವಾಗಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೆಂಡಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು 1954ರ ಸೂಪರ್ ಹಿಟ್ ಹಾಡು ಬಾಬೂಜಿ ಧೀರೇ ಚಲ್‍ನಾ ಉಲ್ಲೇಖಿಸಿ ಟಾಂಗ್ ಕೊಟ್ಟಿದ್ದಾರೆ.

ದೆಹಲಿಯ ರಸ್ತೆ ಗುಂಡಿಗಳ ಬಗ್ಗೆ ಟ್ವೀಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್, ದೆಹಲಿಯ ಕೆಲ ರಸ್ತೆಗಳು ದೆಹಲಿ ಸರ್ಕಾರದ ಅಡಿಯಲ್ಲಿ ಬರುತ್ತೆ. ಆದ್ರೆ ಇದ್ರಲ್ಲಿ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಅಲ್ಲದೆ ಮಳೆಯಿಂದಾಗಿ ರಸ್ತೆಗಳು ಅಲ್ಲಲ್ಲಿ ಹಾಳಾಗಿವೆ. ಹೀಗಾಗಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ರಸ್ತೆ ಪರಿಶೀಲನೆ ನಡೆಸುತ್ತಿದ್ದೇವೆ. ನಮ್ಮ 50 ಶಾಸಕರು ಇವತ್ತು ತಲಾ 25 ಕಿಲೋಮೀಟರ್ ರಸ್ತೆಗಳ ಪರಿಶೀಲನೆ ನಡೆಸಲಿದ್ದಾರೆ. ಇಂಜಿನಿಯರ್‍ಗಳು ಕೂಡ ಅವರ ಜೊತೆಗೆ ಇರುತ್ತಾರೆ. ಜೊತೆಗೆ ಆ್ಯಪ್ ನಲ್ಲಿ ಗುಂಡಿಯ ಫೋಟೋ ಮತ್ತು ಲೊಕೇಶನ್ ಅಪ್‍ಲೋಡ್ ಮಾಡಿದ್ರೆ ಕೂಡಲೇ ಸರಿಪಡಿಸಲಾಗುತ್ತೆ ಎಂದಿದ್ದಾರೆ.

ಅರವಿಂದ್ ಕೇಜ್ರಿವಾಲ್‍ಗೆ ತಿರುಗೇಟು ಕೊಟ್ಟು ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, ಬಾಬೂಜಿ ನಿಧಾನವಾಗಿ ನಡೆಯಿರಿ. ದೊಡ್ಡ ದೊಡ್ಡ ಗುಂಡಿಗಳು ರಸ್ತೆಯಲ್ಲಿವೆ. ನಮಗೆ ದಿಲ್ಲಿಯ ಅಸಲಿಯತ್ತು ಗೊತ್ತಿದೆ. ಆದ್ರೆ ತಮ್ಮನ್ನು ತಾವು ಖುಷಿಯಲ್ಲಿಡಲು ಅರವಿಂದ್ ಕೇಜ್ರಿವಾಲ್ ಮಾಡ್ತಿರೋ ಈ ಪ್ರಯತ್ನ ಚೆನ್ನಾಗಿದೆ ಎಂದಿದ್ದಾರೆ.

Contact Us for Advertisement

Leave a Reply