ಬೆಂಗಳೂರಿನಲ್ಲಿ ನಡೆಯಲಿವೆ ಜಿ20 ಪೂರ್ವ ಸಭೆಗಳು!

masthmagaa.com:

ಭಾರತ ಜಿ20 ಸಭೆಯ ಅಧ್ಯಕ್ಷತೆಯನ್ನ ಅಧಿಕೃತವಾಗಿ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ಸರಣಿ ಜಿ20 ಸಭೆಗಳನ್ನ ನಡೆಸೋಕೆ ಭಾರತ ರೆಡಿಯಾಗಿದೆ. ಇದರ ಭಾಗವಾಗಿ ಎರಡು ಸಭೆಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಡಿಸೆಂಬರ್‌ 13 ರಿಂದ 15 ರವರೆಗೆ ಫಿನಾನ್ಸ್‌ ಆಂಡ್‌ ಸೆಂಟ್ರಲ್‌ ಬ್ಯಾಂಕ್‌ ಡೆಪ್ಯುಟೀಸ್‌ ಮೀಟಿಂಗ್‌, ಹಾಗೂ 16 ಮತ್ತು 17ರಂದು ಫ್ರೇಮ್‌ವರ್ಕ್‌ ವರ್ಕಿಂಗ್‌ ಗ್ರೂಪ್‌ ಮೀಟಿಂಗ್‌ ನಡೆಯಲಿವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಭೆಗಳಲ್ಲಿ ಜಿ20 ದೇಶಗಳ ಪ್ರತಿನಿಧಿಗಳು ಮಾತ್ರ ಅಲ್ದೆ ಇತರ ಜಾಗತಿಕ ನಾಯಕರ ಜೊತೆಗೆ ಐಎಂಎಫ್ ಮತ್ತು WHO ಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಮುಂದಿನ ವರ್ಷ ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಿ20 18ನೇ ಶೃಂಗಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಜಿ20 ಸಭೆಯ ನೇತೃತ್ವ ವಹಿಸಲಿದ್ದಾರೆ.

-masthmagaa.com

Contact Us for Advertisement

Leave a Reply