ಅ.28ರಿಂದ ಭಾರತ-ಬಾಂಗ್ಲಾದೇಶ ನಡುವೆ ವಿಮಾನ ಸಂಚಾರ

masthmagaa.com:

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಅಂತರಾಷ್ಟ್ರೀಯ ವಿಮಾನ ಸಂಚಾರ ಅಕ್ಟೋಬರ್‌ 28ರಿಂದ ಮತ್ತೆ ಆರಂಭವಾಗಲಿದೆ. ಕೊರೋನಾದಿಂದಾಗಿ ಸತತ 8 ತಿಂಗಳು ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಏರ್‌ ಬಬಲ್‌ ವ್ಯವಸ್ಥೆಯ ಮೂಲಕ ಉಭಯ ರಾಷ್ಟ್ರಗಳಲ್ಲಿ ಹಾರಾಟ ನಡೆಸಲು ಸಿದ್ಧವಾಗಿವೆ. ಭಾರತವು ಯುಎಸ್‌, ಯುಕೆ, ಫ್ರಾನ್ಸ್‌ , ಜರ್ಮನಿ ದೇಶಗಳೊಂದಿಗೆ ಈ ಏರ್‌ ಬಬಲ್ ವ್ಯವಸ್ಥೆಯನ್ನು ಜುಲೈನಿಂದಲೇ ಜಾರಿಗೊಳಿಸಿದೆ. ಸದ್ಯ ಭಾರತ ಹಾಗೂ ಬಾಂಗ್ಲಾದೇಶದ ನಡುವೆ ವಾರಕ್ಕೆ 28 ವಿಮಾನಗಳನ್ನು ಕಾರ್ಯನಿರ್ವಹಿಸಲಿದ್ದು, ಎರಡು ದೇಶಗಳ ಸುಮಾರು 5,000 ಪ್ರಯಾಣಿಕರು ಪ್ರತಿ ವಾರ ಹಾರಾಟ ನಡೆಸಬಹುದಾಗಿದೆ ಎಂದು ಬಾಂಗ್ಲಾದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ಮಾಹಿತಿ ನೀಡಿದೆ.

ಏರ್​ಬಬಲ್ ಅಂದ್ರೆ ಏನು..?

ಈ ಏರ್​ಬಬಲ್ ಅಂದ್ರೆ ಏನು ಅಂತ ನೀವು ಯೋಚಿಸ್ತಾ ಇರಬಹುದು.. ಏರ್ ಬಬಲ್ ಅಂದ್ರೆ ಎರಡು ದೇಶಗಳ ನಡುವೆ ವಿಮಾನ ಸಂಚಾರಕ್ಕಾಗಿ ವಿಶೇಷವಾಗಿ ಮಾಡಿಕೊಳ್ಳುವ ಒಂದು ಏರ್ ಕಾರಿಡಾರ್ ವ್ಯವಸ್ಥೆ. ಇದ್ರಲ್ಲಿ ಎರಡೂ ದೇಶಗಳು ಒಪ್ಪಂದದ ಮೂಲಕ ವಿಮಾನಯಾನಕ್ಕೆ ಒಪ್ಪಿಗೆ ನೀಡುತ್ತವೆ. ಕೊರೋನಾ ಹಿನ್ನೆಲೆಯಲ್ಲಿ ಹೇರಲಾಗಿರುವ ಕೆಲವೊಂದು ನಿಬಂಧನೆಗಳ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎರಡು ದೇಶಗಳ ನಡುವೆ ಏರ್​ ಬಬಲ್ ವಿಮಾನಯಾನ ಶುರು ಮಾಡಬಹುದು..

-masthmagaa.com

Contact Us for Advertisement

Leave a Reply