ತಿಂಡಿಯಲ್ಲಿ ಕೂದಲು ಸಿಕ್ಕಿದ್ದಕ್ಕೆ ಹೆಂಡತಿ ತಲೆ ನುಣ್ಣಗೆ ಬೋಳಿಸಿದ..!

ನಾವೆಲ್ಲಾ ತಿಂಡಿ ತಿನ್ನೋವಾಗ ಒಂದು ಕೂದಲು ಸಿಕ್ರೆ ಏನ್ ಮಾಡ್ತೀವಿ..? ಕೆಲವರು ತಿಂಡಿ ಎಸೀತಾರೆ. ಇನ್ ಕೆಲವರು ಕೂದಲು ಪಕ್ಕಕ್ಕಿಟ್ಟು ತಿಂಡಿ ತಿಂತಾರೆ. ಆದ್ರೆ ಬಾಂಗ್ಲಾದೇಶದಲ್ಲೊಬ್ಬ ತಿಂಡಿಯಲ್ಲಿ ಕೂದಲು ಸಿಕ್ಕಿದ್ದಕ್ಕೆ ಹೆಂಡತಿ ತಲೆಯನ್ನೇ ನುಣ್ಣಗೆ ಬೋಳಿಸಿದ್ದಾನೆ. ಬಾಂಗ್ಲಾದೇಶದ ಡಾಕಾದ ಜಯಪುರ್ ಹಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬಬ್ಲು ಮೊಂಡಲ್ ಎಂಬ 35 ವರ್ಷದ ವ್ಯಕ್ತಿ ತಿಂಡಿ ತಿನ್ನುವಾಗ ತಲೆಕೂದಲು ಸಿಕ್ಕಿದೆ. ಇದ್ರಿಂದ ಕೋಪಗೊಂಡ ಬಬ್ಲು ತನ್ನ 23 ವರ್ಷದ ಹೆಂಡತಿಯ ತಲೆ ಕೂದಲನ್ನು ಬಲವಂತವಾಗಿ ಬೋಳಿಸಿದ್ದಾನೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಗ್ರಾಮದೊಳಗೆ ನುಗ್ಗಿ ಬಬ್ಲು ಮೊಂಡಲ್ ನನ್ನು ಅರೆಸ್ಟ್ ಮಾಡಿದ್ದಾರೆ. ಬಬ್ಲು ಮೇಲೆ ವಿವಿಧ ಕೇಸ್ ಕೂಡ ದಾಖಲಾಗಿದ್ದು, 14 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಈ ಘಟನೆ ಇಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತೋರಿಸುತ್ತದೆ ಎಂದು ಇಲ್ಲಿನ ಹೋರಾಟಗಾರರು ಆರೋಪಿಸಿದ್ದಾರೆ. ಐನ್ ಓ ಸಲಿಶ್ ಕೇಂದ್ರ ಎಂಬ ಸಂಘಟನೆಯ ಪ್ರಕಾರ ಕಳೆದ 6 ತಿಂಗಳಲ್ಲಿ ಸರಾಸರಿಯಾಗಿ ನೋಡಿದ್ರೆ ಪ್ರತಿದಿನವೂ 3 ಯುವತಿಯರ ಮೇಲೆ ಅತ್ಯಾಚಾರ ನಡೆದಿದೆ. ಜನವರಿಯಿಂದ ಜೂನ್ ವರೆಗೆ 630 ಮಹಿಳೆಯರ ಮೇಲೆ ರೇಪ್ ನಡೆದಿದ್ದು, 37 ಜನರನ್ನು ಕೊಲೆಗೈಯ್ಯಲಾಗಿದೆ ಎಂದು ತಿಳಿಸಿದೆ.

Contact Us for Advertisement

Leave a Reply