ಮೃತ ಸೈನಿಕನ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ! 25 ಲಕ್ಷ ರೂಪಾಯಿ ಪರಿಹಾರ: ಸಿಎಂ ಘೋಷಣೆ

masthmagaa.com:

ಈ ಅಮೃತ ಮಹೋತ್ಸವ ರಾಜ್ಯದಲ್ಲೂ ಅದ್ದೂರಿಯಾಗಿ ಆಚರಣೆಯಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ್ರು. ಈ ವೇಳೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ರು. ಬಳಿಕ ಮಾತನಾಡಿದ ಬೊಮ್ಮಾಯಿ, ದೇಶ ಮೊದಲು ಅನ್ನೋ ಭಾವನೆ ಇರಬೇಕು. ದೇಶ ಸ್ವಾಭಿಮಾನ ಸಂಕೇತ. ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು,ದೇಶಕ್ಕೆ ಜನತೆಯ ಶ್ರಮ, ಶ್ರದ್ಧೆ, ಅಭಿಮಾನ, ಬೆವರಿನ ಹನಿ ಮುಖ್ಯ ಅಂತ ಹೇಳಿದ್ರು. ಇನ್ನು ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾಗುವ ರಾಜ್ಯದ ಯೋಧರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡೋದಾಗಿ ಹೇಳಿದ್ರು. ಜೊತೆಗೆ ಯಾವುದೇ ವಿಳಂಬ ಮಾಡದೇ ಮೃತ ಸೈನಿಕನ ಕುಟುಂಬಸ್ಥರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ಘೋಷಿಸಿದ್ರು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಶೇ. 100ರಷ್ಟು ಶೌಚಾಲಯ ನಿರ್ಮಾಣ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕೆಲವು ನಿರ್ಧಿಷ್ಟ ಸಮುದಾಯಗಳಿಗೆ ತಲಾ 50 ಸಾವಿರವರೆಗೆ ಸಾಲ ಸಹಾಯಧನ ಯೋಜನೆ ಜಾರಿ ಗೊಳಿಸೋದಾಗಿ ಅನೌನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply