ಮೊದಲ ದಿನವೇ ರಾಜ್ಯಕ್ಕೆ ಬಂಪರ್ ಗಿಫ್ಟ್ ನೀಡಿದ ಸಿಎಂ ಬೊಮ್ಮಾಯಿ

masthmagaa.com:

ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಮೊದಲ ಸಚಿವ ಸಂಪುಟ ಸಭೆಯಲ್ಲೇ ವಿವಿಧ ವರ್ಗದ ಜನರಿಗೆ ಬಂಪರ್‌ ಗಿಫ್ಟ್‌ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಕೆಲವು ಪ್ರಮುಖ ನಿರ್ಧಾರಗಳು ಈ ರೀತಿ ಇವೆ..
– ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹೊಸ ವಿದ್ಯಾರ್ಥಿ ವೇತನ ಅಥವಾ ಸ್ಕಾಲರ್​ಶಿಪ್​ ಯೋಜನೆ ಜಾರಿ. ಇದಕ್ಕಾಗಿ ಈ ವರ್ಷ 1000 ಕೋಟಿ ಅನುದಾನ ಮೀಸಲು.
– ಸಂಧ್ಯಾ ಸುರಕ್ಷಾ ಯೋಜನೆಯ ಮಾಸಿಕ ವೇತನ 1,000ದಿಂದ 1,200 ರೂಪಾಯಿಗೆ ಹೆಚ್ಚಳ. ಇದಕ್ಕಾಗಿ 863 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದ್ದು, 35.98 ಲಕ್ಷ ಫಲಾನುಭವಿಗಳಿಗೆ ಲಾಭ.
– ಮಾಸಿಕ ವಿಧವಾ ವೇತನ 600ರಿಂದ 800 ರೂಪಾಯಿಗೆ ಹೆಚ್ಚಳ. ಇದಕ್ಕಾಗಿ ಹೆಚ್ಚುವರಿಯಾಗಿ 414 ಕೋಟಿ ರೂ. ವೆಚ್ಚವಾಗಲಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ.
– 40%ನಿಂದ 75%​​ ಅಂಗವಿಕಲತೆ ಇರೋರಿಗೆ ನೀಡ್ತಿದ್ದ ಮಾಸಿಕ ವೇತನ 600ರಿಂದ 800 ರೂಪಾಯಿಗೆ ಏರಿಕೆ. ಇದರಿಂದ 90 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದ್ದು, 3.66 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದೆ.

ಇನ್ನು ನಾಳೆ ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯನ್ನ ಭೇಟಿಯಾಗಲು ಕಾಲಾವಕಾಶ ಕೇಳಿರೋ ಅವರು ವರಿಷ್ಠರನ್ನ ಭೇಟಿಯಾದ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸ್ತೀನಿ ಅಂತ ಹೇಳಿದ್ದಾರೆ. ಇದರ ಬೆನ್ನಲ್ಲೇ ಮಂತ್ರಿಗಿರಿಗಾಗಿ ಶಾಸಕರ ಪೈಪೋಟಿ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯಂತೂ, ನಾನು ಮೊದಲಿನಿಂದಲೂ ಸಚಿವ ಸ್ಥಾನ ಕೇಳ್ತಾ ಇದ್ದೀನಿ. ಈಗಲೂ ಕೇಳ್ತೀನಿ. ಮಂತ್ರಿಗಿರಿಗೆ ನಾನು ಹೈಲಿ ಕ್ವಾಲಿಫೈಯ್ಡ್​. ಐಎಎಸ್​ ಒಂದು ಮಾಡಿಲ್ಲ ಎಂದಿದ್ದಾರೆ. ಮತ್ತೊಂದುಕಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೊಮ್ಮಾಯಿ ಅವರ ಸಂಪುಟಕ್ಕೆ ಸೇರಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ಕೊಟ್ಟಿರೋ ಅವರು ನಾನು ಮಾಜಿ ಸಿಎಂ ಮತ್ತು ಹಿರಿಯ ನಾಯಕ ಆಗಿರೋದ್ರಿಂದ ಈ ನಿರ್ಧಾರ ತಗೊಂಡಿದ್ದೀನಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply