ಒಂದೇ ಮಂಟಪ, ಒಂದೇ ಮುಹೂರ್ತದಲ್ಲಿ ಇಬ್ಬರನ್ನ ವರಿಸಿದ ಯುವಕ

masthmagaa.com:

ಕೊರೋನಾ ಹಾವಳಿ ನಡುವೆನೂ ಸಾಕಷ್ಟು ಮದ್ವೆಗಳು ನಡೆದಿದೆ, ನಡೀತಿವೆ. ಅದ್ರಲ್ಲಿ ಒಂದು ಮದ್ವೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಈ ಮದ್ವೆ ನಡೆದಿದ್ದು ಛತ್ತೀಸ್​ಗಢದ ಬಸ್ತಾರ್​ ಜಿಲ್ಲೆಯಲ್ಲಿ. ಇಲ್ಲಿ ಚಂದು ಮೌರ್ಯ ಎಂಬ 24 ವರ್ಷದ ಯುವಕ ಒಂದೇ ದಿನ, ಒಂದೇ ಮಂಟಪ, ಒಂದೇ ಮುಹೂರ್ತದಲ್ಲಿ ಇಬ್ಬರು ಯುವತಿಯರನ್ನ ಮದ್ವೆಯಾಗಿದ್ದಾನೆ. ಮದ್ವೇಲಿ ಕುಟುಂಬಸ್ಥರು, ಗ್ರಾಮಸ್ಥರು ಭಾಗವಹಿಸಿ ಎಂಜಾಯ್ ಕೂಡ ಮಾಡಿದ್ದಾರೆ. ಈ ಮದ್ವೆಯ ವಿಡಿಯೋ ಹಾಗೂ ಇನ್ವಿಟೇಷನ್​ ಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೆ ಈ ಚಂದು ಮೌರ್ಯ ಎಲೆಕ್ಟ್ರಿಸಿಟಿ ಕಂಬ ಇರುತ್ತಲಾ ಅದನ್ನ ಹಾಕೋ ಕೆಲ್ಸ ಮಾಡ್ತಿದ್ದ. ಒಂದಿನ ಹೀಗೆ ಕೆಲಸಕ್ಕೆ ಅಂತ ಹೋದಾಗ ಸುಂದ್ರಿ ಅನ್ನೋಳಿಗೆ ಈತನ ಮೇಲೆ ಲವ್ ಆಗಿದೆ. ಇಬ್ಬರೂ ಮದ್ವೆ ಆಗ್ಬೇಕು ಅಂತ ಪ್ಲಾನ್ ಮಾಡಿದ್ರು. ಅಷ್ಟರಲ್ಲಿ ಚಂದು ಊರಲ್ಲಿ ನಡೆದ ಮದ್ವೆ ಕಾರ್ಯಕ್ರಮವೊಂದಕ್ಕೆ ಹಸೀನಾ ಅನ್ನೋಳು ಬಂದಿದ್ದಾಳೆ. ಅಲ್ಲಿ ಚಂದುನನ್ನ ನೋಡಿದ ಹಸೀನಾಗೆ ಲವ್ ಆಗಿ ಪ್ರಪೋಸ್ ಕೂಡ ಮಾಡಿದ್ದಾಳೆ. ಆಗ ಚಂದು, ನಾನು ಆಲ್ರೆಡಿ ರಿಲೇಶನ್​​ಶಿಪ್​ನಲ್ಲಿದ್ದೇನೆ ಅಂತ ಹೇಳಿ ಕಳಿಸಿದ್ದಾನೆ. ಆದ್ರೂ ಇಬ್ರೂ ಫೋನ್​ ಕಾಂಟ್ಯಾಕ್ಟ್ ಇಟ್ಟುಕೊಂಡಿದ್ರು. ಒಂದಿನ ಹಸೀನಾ ಸೀದಾ ಚಂದು ಮನೆಗೆ ಬಂದು ಅಲ್ಲೇ ಸೆಟ್ಲ್ ಆಗಿದ್ದಾಳೆ. ಈ ವಿಚಾರ ಸುಂದ್ರಿಗೆ ಗೊತ್ತಾಗಿ, ಆಕೆ ಕೂಡ ಚಂದು ಮನೆಗೆ ಬಂದಿದ್ದಾಳೆ. ಹೀಗೆ ಮೂವರು ಕೂಡ ಒಂದೇ ಮನೆಯಲ್ಲಿ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ರು. ಆದ್ರೆ ಅಕ್ಕಪಕ್ಕದ ಮನೆಯವರಿಗೆ ಇದು ಹಿಡಿಸಲಿಲ್ಲ. ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಚಂದುನನ್ನ ಹಿಂಡಿ ಹಿಪ್ಪೆ ಮಾಡಿದ್ರು. ಕೊನೆಗೆ ಚಂದು ಇಬ್ಬರನ್ನ ಮದ್ವೆಯಾಗಲು ಮುಂದಾಗಿದ್ದಾನೆ. ಇದಕ್ಕೆ ಸುಂದ್ರಿ ಮತ್ತು ಹಸೀನಾ ಕೂಡ ಖುಷ್​ ಖುಷಿಯಿಂದ ಒಪ್ಪಿ ಮದ್ವೆಯಾಗಿದ್ದಾರೆ.

-masthmagaa.com

Contact Us for Advertisement

Leave a Reply