masthmagaa.com:
ಕ್ರಿಕೆಟ್ ಟೂರ್ನಮೆಂಟ್ ವೇಳೆ ನಾನ್ ಸ್ಟ್ರೈಕರ್ನ ತುದಿಯಲ್ಲಿ ನಿಂತಿದ್ದ ಬ್ಯಾಟ್ಸ್ಮನ್ ದಿಢೀರ್ ಅಂತ ಕುಸಿದುಬಿದ್ದು ಮೃತಪಟ್ಟಿರುವ ಶಾಕಿಂಗ್ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ಅಂದ್ಹಾಗೆ ಪುಣೆಯ ಜುನ್ನಾರ್ ಎಂಬಲ್ಲಿ ಸ್ಥಳೀಯ ಕ್ರಿಕೆಟ್ ಟೂರ್ನಮೆಂಟ್ ನಡೀತಿತ್ತು. ಈ ವೇಳೆ ನಾನ್ ಸ್ಟ್ರೈಕರ್ನಲ್ಲಿದ್ದ ಬ್ಯಾಟ್ಸ್ಮನ್ ಸುಸ್ತಾಗಿ ಕೆಳಗೆ ಕೂತಿದ್ದಾನೆ. ಹೀಗೆ ಕೂತವನು ಹಾಗೇ ಹಿಂದಕ್ಕೆ ಪಲ್ಟಿ ಹೊಡೆದಿದ್ದಾನೆ. ತಕ್ಷಣ ಇದನ್ನ ನೋಡಿದ ಅಂಪೈರ್ ಆಟವನ್ನ ನಿಲ್ಲಿಸಿದ್ದಾರೆ. ಆಗ ಸ್ಟ್ರೈಕ್ನಲ್ಲಿದ್ದ ಬ್ಯಾಟ್ಸ್ಮನ್, ಕೀಪರ್, ಬೌಲರ್ಗಳೆಲ್ಲಾ ಈತನ ಬಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆತ ಹೃದಯಾಘಾತದಿಂದ ಮೃತಪಟ್ಟಿದ್ದ. ಇದಕ್ಕೂ ಮೊದಲು ಸ್ಟ್ರೈಕ್ನಲ್ಲಿದ್ದ ಬ್ಯಾಟ್ಸ್ಮನ್ ಒಂದು ಬಾಲ್ ಬೀಟ್ ಮಾಡಿದ್ದ. ಆಗ ಈತ ಅಂಪೈರ್ ಬಳಿ ಎಷ್ಟು ಬಾಲ್ ಬಾಕಿ ಉಳಿದಿದೆ ಅಂತ ಕೇಳಿ ಅದನ್ನ ಸ್ಟ್ರೈಕ್ನಲ್ಲಿದ್ದ ಬ್ಯಾಟ್ಸ್ಮನ್ಗೆ ತಿಳಿಸಿದ್ದ. ಆದ್ರೆ ಬೌಲರ್ ನೆಕ್ಸ್ಟ್ ಬಾಲ್ ಬೌಲಿಂಗ್ ಮಾಡುವ ಮೊದಲೇ ಈತ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾನೆ.
-masthmagaa.com
Contact Us for Advertisement