ಚೀನಾದಲ್ಲಿ ಉಗ್ರರೂಪದ ಪ್ರತಿಭಟನೆ! BBC ಪತ್ರಕರ್ತನ ಮೇಲೆ ಹೌಹಾರಿ ಬಿದ್ದ ಚೀನಾ ಪೊಲೀಸರು!

masthmagaa.com:

ಕೊರೋನಾ ವೈರಾಣುವನ್ನ ಇಡೀ ಜಗತ್ತಿಗೆ ಹರಿಬಿಟ್ಟು ಅಟ್ಟಹಾಸ ಮೆರೆದ ಚೀನಾಗೆ ಅದೇ ಕೊರೋನಾದಿಂದ ಭಾರಿ ಸಂಕಷ್ಟ ಎದುರಾಗಿದೆ. ಚೀನಾದಲ್ಲಿ ಎಗ್ಗಿಲ್ಲದೇ ಕೊವಿಡ್‌ ಪ್ರಕರಣಗಳು ಸ್ಟೋಟಗೊಳ್ತಿವೆ. ಆದ್ರೆ ಆಡಳಿತರೂಢ ಕಮ್ಯುನಿಷ್ಟ್‌ ಪಾರ್ಟಿ ಮಾತ್ರ ಜನರನ್ನ ಜೀರೋ ಕೋವಿಡ್‌ ನೀತಿಯಲ್ಲಿ ಸಾಮೂಹಿಕ ಬಂಧನ ವಿಧಿಸ್ತಿದೆ. ಹೀಗಾಗಿ ಅದನ್ನ ವಿರೋಧಿಸಿ ಅಲ್ಲಿನ ಜನ ಸರ್ಕಾರದ ವಿರುದ್ದವೇ ಬೀದಿಗಿಳಿದಿದ್ದು ಪ್ರತಿಭಟನೆ ಉಗ್ರರೂಪಕ್ಕೆ ತಿರುಗಿದೆ. 1989 ರಲ್ಲಿ ಚೀನಾದಲ್ಲಿ ಪ್ರಜಾಪ್ರಭುತ್ವ ಪರ ರ್ಯಾಲಿಗಳನ್ನು ಮಾಡಲಾಗ್ತಿತ್ತು. ಅದಾದ ನಂತರ ಜನ ಈ ಪರಿ ಹೋರಾಟ ಮಾಡ್ತಿರೋದು ಇದೇ ಮೊದಲು ಅಂತ ಹೇಳಲಾಗ್ತಿದೆ. ಚೀನಾದಾದ್ಯಂತ ಅನೇಕ ನಗರಗಳಲ್ಲಿ ಕಿಕ್ಕಿರದು ಜನ ಸೇರಿದ್ದಾರೆ. ಅಧ್ಯಕ್ಷ ಜಿನ್‌ ಪಿಂಗ್‌ ವಿರುದ್ದ ಒಂದೇ ದನಿಯಲ್ಲಿ ಆಕ್ರೋಶ ಹೊರಹಾಕ್ತಿದ್ದಾರೆ. ಜಿನ್‌ ಪಿಂಗ್‌ ಈ ಕೂಡಲೇ ತಮ್ಮ ಪದವಿಗೆ ರಾಜೀನಾಮೆ ಕೊಡ್ಬೇಕು ಅಂತ ಒತ್ತಾಯ ಮಾಡ್ತಿದ್ದಾರೆ. ʼಜಿನ್‌ ಪಿಂಗ್‌ ಕೆಳಗಿಳಿ, ಕಮ್ಯೂನಿಸ್ಟ್‌ ಕೆಳಗಿಳಿʼ ಅಂತ ಘೋಷಣೆಗಳನ್ನ ಕೂಗ್ತಿದ್ದಾರೆ. ಇತ್ತ ಈ ಪ್ರತಿಭಟನೆಗಳನ್ನ ವರದಿ ಮಾಡ್ತಿದ್ದ British Broadcasting Corporation (BBC)ಗೆ ಸೇರಿದ ಪತ್ರಕರ್ತನ ಮೇಲೆ ಹಲ್ಲೆ ಮಾಡಲಾಗಿದೆ. ಶಾಂಘೈನಲ್ಲಿ ಜನ ಪ್ರತಿಭಟನೆ ಮಾಡ್ತಿದ್ರು. ಅದನ್ನ ಇ.ಡಿ ಲಾರೆನ್ಸ್‌ ಅನ್ನೋ ಬಿಬಿಸಿ ಕ್ಯಾಮೆರಾಮನ್‌ ಸೆರೆ ಹಿಡಿತಾ ಇದ್ರು. ಕೂಡಲೇ ಚೀನಾದ ಪೊಲೀಸರು ಈತನನ್ನ ಮನಬಂದಂತೆ ಥಳಿಸಿ, ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಇತ್ತ ಚೀನಾದ ಈ ಕ್ರಮವನ್ನ ವಿರೋಧಿಸಿ ಬಿಬಿಸಿ ಆಕ್ರೋಶ ಹೊರಹಾಕಿದೆ. ʻಮಾನ್ಯತೆ ಪಡೆದ ಪತ್ರಕರ್ತನ ಮೇಲೆ ಈ ರೀತಿ ದಾಳಿಯಾಗಿರೋದು ನಿಜಕ್ಕೂ ಆಕ್ಷೇಪಾರ್ಹ ವಿಚಾರ. ಚೀನಾದ ಈ ನಡೆಯ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೀವಿ ಅಂತ ಹೇಳಿದೆ. ಇನ್ನು ರಾಜಧಾನಿ ಬೀಜಿಂಗ್‌ನಲ್ಲಿ ಸುಮಾರು 400-500 ಜನ ಒಂದು ಕಡೆ ಸೇರ್ಕೊಂಡು ʻನಾವೆಲ್ಲರೂ ಕ್ಸಿನ್‌ಜಿಯಾಂಗ್‌ ಜನ..ಚೀನೀಗಳೇ ನೀವು ಅಲ್ಲಿಂದ ತೊಲಗಿ ಅಂತ ಕೂಗಿದ್ದಾರೆ. ಈ ಮೂಲಕ ಚೀನಾದ ಕಮ್ಯೂನಿಸ್ಟ್‌ ಸರ್ಕಾರದ ಮೇಲೆ ಯಾರಿಯಾರಿಗೆ ಯಾವ ಯಾವ ಕೋಪ ಇದೆ ಎಲ್ಲವನ್ನೂ ಜನ ಕೊರೊನಾ ಹೆಸರಲ್ಲಿ ಹೊರ ಹಾಕ್ತಿದ್ದಾರೆ. ಇದರ ನಡುವೆಯೇ ಜೀರೋ ಜೀರೋ ಅಂತಿರೋ ಚೀನಾದಲ್ಲಿ ಸೋಮವಾರ ಒಂದೇ ದಿನ 40,052 ಕೊವಿಡ್ ಕೇಸ್‌ಗಳು ಪತ್ತೆಯಾಗಿವೆ.

-masthmagaa.com

Contact Us for Advertisement

Leave a Reply