ಐತಿಹಾಸಿಕ ಗೆಲುವು: BCCIನಿಂದ ಟೀಂ ಇಂಡಿಯಾಗೆ ₹5 ಕೋಟಿ ಬೋನಸ್

masthmagaa.com:

ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಮತ್ತು ಕೊನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ರೋಚಕ ಮತ್ತು ಐತಿಹಾಸಿಕ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲೇ ಇಡೀ ತಂಡಕ್ಕೆ ಬಿಸಿಸಿಐ ಬರೋಬ್ಬರಿ 5 ಕೋಟಿ ರೂಪಾಯಿ ಬೋನಸ್ ಘೋಷಿಸಿದೆ. ಈ ಬಗ್ಗೆ ಬಿಸಿಸಿಐ ಸೆಕ್ರೆಟರಿ ಜೈ ಶಾ ಟ್ವೀಟ್ ಮಾಡಿದ್ದಾರೆ. ಗೆಲುವಿಗೆ 328 ಟಾರ್ಗೆಟ್​ ಬೆನ್ನತ್ತಿದ ಭಾರತ ಕೊನೇ ದಿನದ ಆಟ ಮುಗಿಯೋಕೆ ಕೇವಲ 18 ಬಾಲ್​ಗಳು ಬಾಕಿ ಇರುವಂತೆಯೇ 3 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಯನ್ನ ಟೀಂ ಇಂಡಿಯಾ 2-1 ಅಂತರದಿಂದ ಕೈವಶ ಮಾಡಿಕೊಂಡಿದೆ. ಟೀಂ ಇಂಡಿಯಾ ಪರ ರಿಷಬ್ ಪಂತ್ ಅಜೇಯ 89 ರನ್ ಸಿಡಿಸಿ ಮಿಂಚಿದ್ರು. ಉಳಿದಂತೆ 21 ವರ್ಷದ ಓಪನರ್​ ಶುಬ್​ಮನ್​​ ಗಿಲ್ 91 ರನ್​ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಚೇತೇಶ್ವರ ಪೂಜಾರ – 56, ಅಜಿಂಕ್ಯ ರಹಾನೆ – 24, ವಾಷಿಂಗ್ಟನ್​ ಸುಂದರ್ – 22 ರನ್​ ಸಿಡಿಸಿದ್ರು. ಇನ್ನು 1988ರ ಬಳಿಕ ಬ್ರಿಸ್ಪೇಬ್​ನ ‘ಗಬ್ಬ’ ಗ್ರೌಂಡ್​ನಲ್ಲಿ ಆಸ್ಟ್ರೇಲಿಯಾ ಮಣಿಸಿದ ಏಕೈಕ ತಂಡ ಎನಿಸಿಕೊಂಡಿದೆ ಭಾರತ. ಈ ಹಿಂದೆ  1988ರಲ್ಲಿ ಗಬ್ಬ ಗ್ರೌಂಡ್​ನಲ್ಲಿ ಆಸ್ಟ್ರೇಲಿಯಾವನ್ನ ವೆಸ್ಟ್​ ಇಂಡೀಸ್​ ಸೋಲಿಸಿತ್ತು. ಇಷ್ಟೇ ಅಲ್ಲದೆ ಗಬ್ಬದಲ್ಲಿ ಮೊದಲ ಗೆಲುವಿನ ಸಿಹಿ ಉಂಡಿದೆ ಭಾರತ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂಡೇ ಸರಣಿ ಸೋತ ಭಾರತ ಟಿ-20 ಮತ್ತು ಟೆಸ್ಟ್​ ಸರಣಿಗಳನ್ನ ಗೆದ್ದಂತಾಗಿದೆ.

ಸ್ಕೋರ್:

ಆಸ್ಟ್ರೇಲಿಯಾ: 369 & 294

ಭಾರತ: 336 & 329

-masthmagaa.com

Contact Us for Advertisement

Leave a Reply