ವಿವಾದದ ಮಧ್ಯೆ BCCIನ ಮುಖ್ಯ ಆಯ್ಕೆಗಾರ ಚೇತನ್‌ ಶರ್ಮಾ ರಾಜೀನಾಮೆ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI)ನ ಮುಖ್ಯ ಆಯ್ಕೆಗಾರ ಚೇತನ್‌ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಟಿಂಗ್‌ ಆಪರೇಷನ್‌ನಲ್ಲಿ ನೀಡಿದ ಹೇಳಿಕೆಯಿಂದ ಉಂಟಾಗಿರೊ ವಿವಾದದ ನಡುವೆಯೇ ಈ ನಿರ್ಧಾರ ತೆಗೆದುಕೊಂಡಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಶರ್ಮಾ ಅವರ ರಾಜೀನಾಮೆಯನ್ನ ಅಂಗೀಕರಿಸಿದ್ದಾರೆ. ಅವರಿಂದ ನಾವು ರಾಜೀನಾಮೆ ಕೇಳಿರಲಿಲ್ಲ, ಸ್ವತಃ ಅವರೇ ರಾಜೀನಾಮೆ ನೀಡಿದ್ದಾರೆ ಅಂತ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂದ್ಹಾಗೆ ಸ್ಟಿಂಗ್‌ ಆಪರೇಷನ್‌ಲ್ಲಿ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ತಂಡದ ಇತರ ಹಲವಾರು ಆಟಗಾರರ ಬಗ್ಗೆ ಶರ್ಮಾ ವಿಚಿತ್ರ ಕಾಮೆಂಟ್‌ಗಳನ್ನ ಮಾಡಿದ್ದರು. ನಾವು ಕೂಡ ಆ ವಿವಾದದ ಬಗ್ಗೆ ಒಂದು ವಿಡಿಯೋ ಮಾಡಿದ್ದೀವಿ. ಹೆಚ್ಚಿನ ಮಾಹಿತಿಗೆ ಆ ವಿಡಿಯೋ ನೋಡಬೋದು.

-masthmagaa.com

Contact Us for Advertisement

Leave a Reply