ಬೆಂಗಳೂರು ಟ್ರಾಫಿಕ್‌ ಕಂಟ್ರೋಲ್‌ಗೆ ಪೊಲೀಸರ ಹೊಸ ನೀತಿ! ಏನು?

masthmagaa.com:

ಬೆಂಗಳೂರಿನಲ್ಲಿ ಟ್ರಾಫಿಕ್‌ ನಿಯಂತ್ರಿಸೋ ಸಲುವಾಗಿ ಬದಲಾವಣೆಗಳನ್ನ ತರೋಕೆ ಟ್ರಾಫಿಕ್‌ ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೆವಿ ಮತ್ತು ಲೈಟ್‌ ಗೂಡ್ಸ್‌ ವಾಹನಗಳಿಗೆ ನಿರ್ಬಂಧ ವಿಧಿಸಲು ಮುಂದಾಗಿದೆ. ಹೆಬ್ಬಾಳದ ಫ್ಲೈಓವರ್‌ ಬಳಿ ಟ್ರಾಫಿಕ್‌ ದಟ್ಟಣೆ ಹಿನ್ನಲೆ ಕಳೆದ ಒಂದು ವಾರದಿಂದ ಗೂಡ್ಸ್‌ ವಾಹನಗಳನ್ನ ನಿರ್ಬಂಧಿಸಲಾಗಿದೆ. ಈ ಕ್ರಮದಿಂದ 25% ಸಂಚಾರ ದಟ್ಟಣೆ ಕಡಿಮೆಯಾಗಿದೆ. ಟ್ರಾಫಿಕ್‌ನಿಂದ ವ್ಯರ್ಥವಾಗುತ್ತಿದ್ದ ಸವಾರರ 20 ನಿಮಿಷ ಈಗ 7 ನಿಮಿಷಕ್ಕೆ ಇಳಿದಿದೆ. ಹೆವಿ ಮತ್ತು ಲೈಟ್‌ ಗೂಡ್ಸ್ ವಾಹನಗಳ ನಿರ್ಬಂಧದಿಂದ ಟ್ರಾಫಿಕ್ ಸುಧಾರಣೆಯಾಗಲಿದೆ ಅಂತ ವಿಶೇಷ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದ್ದಾರೆ. ಇದೇ ರೀತಿಯಲ್ಲಿ ನಗರದ ಬೇರೆ ಭಾಗಗಳ ಟ್ರಾಫಿಕ್‌ ದಟ್ಟಣೆ ಬಗ್ಗೆ ಅಧ್ಯಯನ ಮಾಡಲಾಗುವುದು ಅಂತ ಸಲೀಂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply