ಮೊರಾಕ್ಕೋ ವಿರುದ್ದ ಸೋತ ಬೆಲ್ಜಿಂತ! ರಾಜಧಾನಿಯಲ್ಲಿ ಭುಗಿಲೆದ್ದ ಹಿಂಸಾಚಾರ!

masthmagaa.com:

ಬೆಲ್ಜಿಯಂ ರಾಜಧಾನಿ ಬ್ರುಸೆಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕತಾರ್‌ನಲ್ಲಿ ನಡೀತಿರೋ ಪುಟ್ಬಾಲ್‌ ವಿಶ್ವಕಪ್ ಪಂದ್ಯದಲ್ಲಿ ಬೆಲ್ಜಿಯಂ ಮೊರಾಕ್ಕೋ ವಿರುದ್ದ 2-0 ಅಂತರದಲ್ಲಿ ಹೀನಾಯವಾಗಿ ಸೋತಿದೆ. ಇದಕ್ಕೆ ಸಿಡಿದಿರೋ ಬೆಲ್ಜಿಯಂ ಅಭಿಮಾನಿಗಳು ಮೊರಾಕ್ಕೋ ಬಾವುಟಗಳನ್ನ ವಿರೂಪಗೊಳಿಸಿ, ತಮ್ಮ ತಂಡದ ವಿರುದ್ದವೂ ಆಕ್ರೋಶ ಹೊರಹಾಕಿದ್ದಾರೆ. ಸಾಲದೂ ಅಂತ ಬಸ್‌ಗೆ ಕಲ್ಲು ತೂರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನ ನಿಯಂತ್ರಿಸೋಕೆ ಅಲ್ಲಿನ ಭದ್ರತಾ ಪಡೆಗಳು ಹರಸಾಹಸ ಮಾಡ್ತಿದ್ದು ಈಗಾಗಲೇ ಅನೇಕರನ್ನ ಬಂಧಿಸಿ ಎಳೆದುಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಪತ್ರಕರ್ತರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಬೆಲ್ಜಿಯನ್‍ನಲ್ಲಿ ಹಲವು ನಿರ್ಬಂಧಗಳನ್ನ ವಿಧಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವತ್ತಾ ಸಾಗ್ತಿದೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply