ಒನ್‌ಡೇ ಮಾದರಿಗೆ ಬೆನ್‌ ಸ್ಟೋಕ್ಸ್‌ ವಿದಾಯ… ನಾಳೆ ಸೌತ್‌ಆಫ್ರಿಕಾ ವಿರುದ್ದ ಕೊನೆ ಪಂದ್ಯ!

masthmagaa.com:

2019ರ ಇಂಗ್ಲೆಂಡ್‌ ವಿಶ್ವಕಪ್‌ ಹೀರೋ ಬೆನ್‌ ಸ್ಟೋಕ್ಸ್‌ ಓಡಿಐಗೆ ನಿವೃತ್ತಿ ಘೋಷಿಸಿದ್ದಾರೆ. ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಪಂದ್ಯ ಈ ಫಾರ್ಮಟ್‌ನಲ್ಲಿ ಸ್ಟೋಕ್ಸ್‌ನ ಕಡೇ ಪಂದ್ಯವಾಗಿರಲಿದೆ. ಮೂರು ಮಾದರಿಯಲ್ಲಿ 100% ಬದ್ಧತೆ ಕೊಟ್ಟು ಆಡಲು ಆಗ್ತಾ ಇಲ್ಲ. ಇದ್ರಿಂದ ತಂಡಕ್ಕೆ ಮೋಸ ಮಾಡಿದಂತೆ ಆಗುತ್ತೆ. ಹಾಗಾಗಿ ರಿಟೈರ್‌ಮೆಂಟ್‌ ನೀಡ್ತೀದ್ದಿನಿ ಟೆಸ್ಟ್‌ ಕ್ರಿಕೆಟ್‌ ಮತ್ತು ಟಿ-20ಯತ್ತ ಫುಲ್‌ ಫೋಕಸ್‌ ಮಾಡ್ತೀನಿ ಅಂತ ಬೆನ್‌ ಸ್ಟೋಕ್ಸ್‌ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ತಾನೆ ಇವ್ರನ್ನ ಇಂಗ್ಲೆಂಡ್‌ ಟೆಸ್ಟ್‌ ಟೀಮ್‌ನ ಕ್ಯಾಪ್ಟನ್‌ ಆಗಿ ನೇಮಕ ಮಾಡಲಾಗಿತ್ತು. 2019ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ 84ರನ್‌ ಗಳಿಸಿ ಸ್ಟೋಕ್ಸ್‌ ಇಂಗ್ಲೆಂಡ್‌ಗೆ ಮೊದಲ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ರು.

-masthmagaa.com

Contact Us for Advertisement

Leave a Reply