ಇಂಗ್ಲೆಂಡ್‌ ಕ್ರಿಕೆಟ್‌ ಟೀಮ್‌ ಜೊತೆ ಪಾಕ್‌ಗೆ ಹೋದ ಅಡುಗೆ ಭಟ್ಟ! ಯಾಕೆ?

masthmagaa.com:

ಪಾಕಿಸ್ತಾನಕ್ಕೆ ಕ್ರಿಕೆಟ್‌ ಟೀಮ್‌ಗಳು ಪ್ರವಾಸ ಮಾಡೋದೆ ಹೆಚ್ಚು ಅಂತದ್ರಲ್ಲಿ ಇಂಗ್ಲೆಂಡ್‌ ಟೀಮ್‌ ತಮ್ಮ ಜೊತೆಗೆ ಶೆಫ್‌ ಒಬ್ರನ್ನ ಅಂದ್ರೆ ಅಡುಗೆ ಮಾಡೋರನ್ನ ಕರೆದುಕೊಂಡು ಹೋಗಿದೆ. ಯಾಕಂದ್ರೆ ಕಳೆದ ಬಾರಿ ಟಿ20 ಸೀರೀಸ್‌ಗೆ ಅಂತ ಬಂದಾಗ ಅಲ್ಲಿಯ ಫುಡ್‌ ತಿಂದು, ಊಟ ಸೆಟ್‌ ಆಗದೇ ಆಟಗಾರರು ಹೊಟ್ಟೆ ಸಮಸ್ಯೆಗಳನ್ನ ಅನುಭವಿಸಿದ್ರು. ಈ ಬಾರಿ ಇವ್ರ ಸವಾಸನೇ ಬೇಡ ಅಂತ ಇಂಗ್ಲೆಂಡಿಂದಲೇ ಒಬ್ಬ ಭಟ್ರನ್ನ ಕರ್ಕೊಂಡು ಹೋಗಿದಾರೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಇದೇ ಮೊದಲ ಬಾರಿಗೆ ಶೆಫ್‌ ಒಬ್ರನ್ನ ವಿದೇಶಿ ಪ್ರವಾಸಕ್ಕೆ ನೇಮಕ ಮಾಡಿದೆ ಎನ್ನಲಾಗಿದೆ. ಅಂದ್ಹಾಗೆ ಇದೇ ಡಿಸೆಂಬರ್‌ನಿಂದ ಇಂಗ್ಲೆಂಡ್‌ ಪಾಕ್‌ನಲ್ಲಿ ಮೂರು ಟೆಸ್ಟ್‌ ಪಂದ್ಯಗಳನ್ನ ಆಡಲಿದೆ.

-masthmagaa.com

Contact Us for Advertisement

Leave a Reply