ಶಾಲೆಗಳಿಗೆ ಬಾಂಬ್‌ ಬೆದರಿಕೆ: ಇಂಟರ್‌ಪೋಲ್‌ ನೆರವು ಕೇಳಲು ಮುಂದಾದ ರಾಜ್ಯ ಪೋಲಿಸ್‌!

masthmagaa.com:

ಕಳೆದ ವಾರ ಬೆಂಗಳೂರು ನಗರದ 48 ಶಾಲೆಗಳು, ನಗರದಾಚೆಯ 22 ಶಾಲೆಗಳಲ್ಲಿ ಸ್ಪೋಟಕ ಇದೆ ಅನ್ನೋ ಫೇಕ್‌ ಇ-ಮೇಲ್‌ಗಳಿಂದ ರಾಜಧಾನಿ ತತ್ತರಿಸಿತ್ತು. ಈ ಬಗ್ಗೆ ಬೆಂಗಳೂರು ಪೊಲೀಸ್‌ ಕಮೀಷನರ್‌ ಬಿ. ದಯಾನಂದ ಮಾತನಾಡಿದ್ದು ಘಟನೆಯ ತನಿಖೆಯಲ್ಲಿ ಇಂಟರ್‌ನ್ಯಾಷನಲ್‌ ಪೊಲೀಸ್‌ ಅಥ್ವಾ ಇಂಟರ್‌ಪೋಲ್‌ ಸಹಕಾರ ಪಡೆಯೋದಾಗಿ ಹೇಳಿದ್ದಾರೆ. ʻಅಮೆರಿಕ, ಮಲೇಶಿಯಾ, ಜರ್ಮನಿ ಹಾಗೂ ಟ್ರಿನಿಡಾಡ್‌ಗಳಲ್ಲಿ ಇಂತಹದ್ದೇ ಪ್ರಕರಣಗಳು ವರದಿಯಾಗಿವೆ. ಎಲ್ಲಾ ಇ-ಮೇಲ್‌ಗಳು ಒಂದೇ ID ಇಂದ ಬಂದಿವೆ. ಮೇಲ್‌ ಕಳಿಸಿರೋ ದುಷ್ಕರ್ಮಿಗಳು Virtual Private Network ಅಥ್ವಾ VPN ಬಳಕೆ ಮಾಡಿದ್ದಾರೆ. ತನಿಖೆಯಲ್ಲಿ ಇಂತಹ ಕೆಲವು ಟೆಕ್ನಿಕಲ್‌ ಜಟಿಲತೆಗಳಿವೆ. ಇ-ಮೇಲ್‌ ಸೇವಾ ಪೂರೈಕೆದಾರರು ಅಂದ್ರೆ ಸರ್ವೀಸ್‌ ಪ್ರೊವೈಡರ್‌ಗಳು ಪೊಲೀಸರಿಗೆ ರೆಸ್ಪಾಂಡ್‌ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ ಅಂತ ಕಮಿಷನರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply