ಕರ್ನಾಟಕ ಅನ್​ಲಾಕ್​​ 3.0.. ಏನೆಲ್ಲಾ ರಿಲೀಫ್ ಗೊತ್ತಾ?

masthmagaa.com:

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಮ್ಮಿಯಾಗ್ತಿರೋ ಬೆನ್ನಲ್ಲೇ ಜನರಿಗೆ ಮತ್ತಷ್ಟು ರಿಲೀಫ್ ಘೋಷಿಸಲಾಗಿದೆ. ಬಹುತೇಕ ರಾಜ್ಯವನ್ನ ಓಪನ್ ಮಾಡಲಾಗಿದೆ. ಇವತ್ತು ರಾಜ್ಯ ಕೊರೋನಾ ಪರಿಸ್ಥಿತಿ ಬಗ್ಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಅನ್​ಲಾಕ್​ 3.0 ಅನ್ನ ಘೋಷಿಸಿದ್ರು. ಇದು ಎರಡು ವಾರ ಅಂದ್ರೆ ಜುಲೈ 19ರ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತೆ ಅಂತ ಸಿಎಂ ಹೇಳಿದ್ರು. ಹಾಗಿದ್ರೆ ಯಾವುದಕ್ಕೆಲ್ಲಾ ಅನುಮತಿ ನೀಡಲಾಗಿದೆ, ಯಾವುದಕ್ಕೆ ಅವಕಾಶ ನೀಡಲ್ಲ ಅನ್ನೋದನ್ನ ಒನ್​ ಬೈ ಒನ್ ಬೈ ನೋಡ್ತಾ ಹೋಗಣ.

ಅನ್​ಲಾಕ್​ 3.0
– ನೈಟ್​ ಕರ್ಫ್ಯೂ ಇರುತ್ತೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಮಾತ್ರ.
– ವಾರಾಂತ್ಯ ಕರ್ಫ್ಯೂ ಇರಲ್ಲ.
– ವ್ಯಾಪಾರ ವಹಿವಾಟಿಗೆ ಸಂಜೆ 5 ಗಂಟೆವರೆಗೆ ಇದ್ದ ಅನುಮತಿ ರಾತ್ರಿ 9 ಗಂಟೆವರೆಗೆ ವಿಸ್ತರಣೆ.
– ಬಸ್​, ಮೆಟ್ರೋಗಳಲ್ಲಿ 100% ಸೀಟು ಭರ್ತಿಗೆ ಅವಕಾಶ.
– ಮಾಲ್​ಗಳನ್ನ ಓಪನ್​ ಮಾಡಲು ಅವಕಾಶ.
– ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ಬೇರೆ ಯಾವುದೇ ಸೇವೆಗಳು ಇರೋದಿಲ್ಲ.
– ಮದ್ವೆ ಸಮಾರಂಭಗಳಲ್ಲಿ 100 ಜನ ಸೇರಲು ಅವಕಾಶ.
– ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ.
– ಸರ್ಕಾರಿ ಕಚೇರಿ 100% ಸಿಬ್ಬಂದಿಯೊಂದಿಗೆ ಓಪನ್.
– ಕ್ರೀಡಾಂಗಣ, ಈಜುಕೊಳಗಳಲ್ಲಿ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಅವಕಾಶ.
– ಪಬ್​​ಗೆ​ ಅವಕಾಶ ಇಲ್ಲ, ಬಾರ್​ಗೆ ಅವಕಾಶ ಇದೆ.
– ಶಾಲಾ-ಕಾಲೇಜು ಸದ್ಯಕ್ಕೆ ಓಪನ್​ ಇಲ್ಲ.
– ಚಿತ್ರಮಂದಿರ ತೆರೆಯಲು ಅವಕಾಶ ಇಲ್ಲ.
– ಸಾಮಾಜಿಕ, ಧಾರ್ಮಿಕ, ರಾಜಕೀಯ ಸಮಾರಂಭಗಳಿಗೆ, ಪ್ರತಿಭಟನೆಗೆ ಅವಕಾಶ ಇಲ್ಲ.

ಇನ್ನು ಯಾವುದಾದ್ರೂ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋ ಅವಶ್ಯಕತೆ ಇದ್ರೆ ಆಗ ಜಿಲ್ಲಾಡಳಿತವು ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ನಿರ್ಬಂಧ ಜಾರಿಗೆ ತರಬಹುದು. 15 ದಿನದಲ್ಲಿ ಕೊರೋನಾ ಕಂಟ್ರೋಲ್​ಗೆ ಬಂದು, ಜನ ಸಹಕರಿಸಿದ್ರೆ ಇದೇ ನಿಯಮ ಮುಂದುವರಿಯುತ್ತೆ. ಇಲ್ಲದಿದ್ರೆ 15 ದಿನದ ನಂತ್ರ ಈ ಸಡಿಲಿಕೆ ಇರಲ್ಲ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply