ಕೆಪಿಎಲ್ ಬೆಟ್ಟಿಂಗ್‍ನ ದೊಡ್ಡ ಕಳ್ಳ ಅಂದರ್..! ಎಲ್ಲರಿಗೂ ಈತ ಅಚ್ಚುಮೆಚ್ಚು..

ಕೆಪಿಇಎಲ್ ಮ್ಯಾಚ್ ಫಿಕ್ಸಿಂಗ್ ನ ಬಹುದೊಡ್ಡ ರೂವಾರಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಐಪಿಎಲ್‍ನಲ್ಲಿ ಆರ್‍ಸಿಬಿ ಪಂದ್ಯದಲ್ಲಿ ಡ್ರಮ್ ಬಾರಿಸುತ್ತಿದ್ದ ಡ್ರಮ್ಮರ್ ಭವೇಶ್ ಬಾಫ್ನನನ್ನು ಪೊಲೀಸರು ಖೆಡ್ಡಾಗೆ ಬೀಳಿಸಿದ್ದಾರೆ. ಐಪಿಎಲ್‍ನಲ್ಲಿ ಡ್ರಮ್ಮರ್ ಆಗಿದ್ದ ಈತ ಕೆಪಿಎಲ್‍ನಲ್ಲಿ ಬೆಟ್ಟಿಂಗ್ ಮಾಡ್ತಿದ್ದ. ದೆಹಲಿ ಮೂಲದ ಈತ ಪಂದ್ಯಕ್ಕೂ ಮುನ್ನವೇ ಬೌಲರ್‍ಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ನಂತರ ಆನ್‍ಲೈನ್‍ನಲ್ಲಿ ಬೆಟ್ಟಿಂಗ್ ದಂಧೆಕೋರರೊಂದಿಗೆ ಸಂಪರ್ಕಿಸುತ್ತಿದ್ದ ಈತ ಮ್ಯಾಚ್ ಫಿಕ್ಸ್ ಮಾಡ್ತಿದ್ದ. ಬೌಲರ್‍ಗಳು ಇಂತಿಷ್ಟೇ ರನ್ ನೀಡಬೇಕು, ವೈಡ್ ಹಾಕಬೇಕು, ಈಸಿಯಾಗಿ ಬೌಲಿಂಗ್ ಮಾಡಬೇಕು ಎಂದು ಸಿಗ್ನಲ್ ಕೊಡ್ತಿದ್ದ. ಈತನ ಸಿಗ್ನಲ್ ಪಡೆದ ಬೌಲರ್ ಅಷ್ಟೇ ರನ್ ನೀಡುತ್ತಿದ್ದರು. ಸಲ್ಲದೆ ಪ್ರತಿ ಓವರ್‍ನಲ್ಲಿ 10 ರನ್‍ಗೂ ಹೆಚ್ಚು ರನ್ ನೀಡಲು 2.5 ಲಕ್ಷದವರೆಗೆ ಆಮಿಷವೊಡ್ಡುತ್ತಿದ್ದ ಎಂದು ತಿಳಿದುಬಂದಿದೆ. ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Contact Us for Advertisement

Leave a Reply