ಚೀನಾ ವೇಗವಾಗಿ ನಮ್ಮ ಹತ್ತಿರಕ್ಕೆ ಬರ್ತಿದೆ: ಅಮೆರಿಕ ಸಂಸತ್​ಗೆ ಬೈಡೆನ್ ವಾರ್ನಿಂಗ್

masthmagaa.com:

ಅಮೆರಿಕ ಸಂಸತ್ತಾದ ಕಾಂಗ್ರೆಸ್​​ನ ಉಭಯ ಸದನಗಳ ಜಂಟಿ ಅಧಿವೇಶನವನ್ನ ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಾತನಾಡಿದ್ದಾರೆ. ಈ ವೇಳೆ ತಮ್ಮ ಮಹತ್ವಾಕಾಂಕ್ಷೆಯ 1.8 ಟ್ರಿಲಿಯನ್ ಡಾಲರ್​ ಪ್ಲಾನ್ ಅನ್ನ ಉಲ್ಲೇಖಿಸಿದ್ರು. ಇದರಲ್ಲಿ ಯುನಿವರ್ಸಲ್ ಪ್ರಿ-ಸ್ಕೂಲ್​, ಎರಡು ವರ್ಷದ ಫ್ರೀ ಕಮ್ಯುನಿಟಿ ಕಾಲೇಜ್ ಮತ್ತು ನ್ಯಾಷನಲ್ ಚೈಲ್ಡ್​​ಕೇರ್ ಪ್ರೋಗ್ರಾಂ ಸೇರಿದಂತೆ ಹಲವು ವಿಚಾರಗಳು ಸೇರಿವೆ. ತೆರಿಗೆ ವಿಚಾರದ ಬಗ್ಗೆ ಮಾತನಾಡಿದ ಬೈಡೆನ್, ವಾರ್ಷಿಕ 4 ಲಕ್ಷ ಡಾಲರ್​ಗಿಂತ ಕಮ್ಮಿ ಆದಾಯ ಇರೋರ ಮೇಲೆ ನಾನು ಯಾವುದೇ ತೆರಿಗೆ ಹಾಕಲ್ಲ. ಆದ್ರೆ ಕಾರ್ಪೊರೇಟ್​ ಮತ್ತು ಜನಸಂಖ್ಯೆಯಲ್ಲಿ 1 ಪರ್ಸೆಂಟ್​ನಷ್ಟಿರುವ ಅಗರ್ಭ ಶ್ರೀಮಂತರು ತೆರಿಗೆ ಕಟ್ಟುವ ಸಮಯ ಬಂದಿದೆ ಅಂತಾನೂ ಹೇಳಿದ್ರು. ಇಷ್ಟುದಿನ ಬೈಡೆನ್ ಅವರ ತೆರಿಗೆ ನೀತಿ, ಪೊಲೀಸ್ ಇಲಾಖೆಯಲ್ಲಿ ಸುಧಾರಣೆ, ಗನ್​ ಕಂಟ್ರೋಲ್ ನೀತಿ​, ವಲಸಿಗರ ನೀತಿಯನ್ನ ವಿರೋಧಿಸುತ್ತಿದ್ದ ರಿಪಬ್ಲಿಕನ್​​ ಪಕ್ಷದ ಸಂಸದರು, ಇವತ್ತು ಬೈಡೆನ್ ಭಾಷಣ ಮಾಡುವಾಗ ಬಹುತೇಕ ಸೈಲೆಂಟ್​ ಆಗೇ ಕೂತ್ಕೊಂಡಿದ್ರು. ಇನ್ನು ತಮ್ಮ ಭಾಷಣದಲ್ಲಿ ಚೀನಾ ಮತ್ತು ರಷ್ಯಾ ವಿಚಾರ ಉಲ್ಲೇಖಿಸೋದನ್ನ ಮರೆಯಲಿಲ್ಲ ಬೈಡೆನ್. ಅಮೆರಿಕ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಮತ್ತು ನಮ್ಮ ಸರ್ಕಾರಿ ಕಚೇರಿಗಳ ಮೇಲೆ ರಷ್ಯಾ ನಡೆಸಿದ ಸೈಬರ್​ ದಾಳಿಗೆ ಸಂಬಂಧಿಸಿದಂತೆ ನಾನು ನೇರವಾಗಿ ಪ್ರತಿಕ್ರಿಯಿಸಿದ್ದೇನೆ. ಅವೆರಡನ್ನೂ ರಷ್ಯಾ ಮಾಡಿರೋದು ನಿಜ. ಹೀಗಾಗಿ ನಾವು ರಷ್ಯಾ ಮೇಲೆ ಸ್ಯಾಂಕ್ಷನ್ಸ್ ಹೇರಿದ್ದೇವೆ ಅಂತ ಹೇಳಿದ್ರು. ಚೀನಾ ಬಗ್ಗೆ ಮಾತನಾಡಿ, ಚೀನಾ ಮತ್ತು ಕೆಲವೊಂದು ದೇಶಗಳು ತುಂಬಾ ವೇಗವಾಗಿ ನಮ್ಮ ಹತ್ತಿರಕ್ಕೆ ಬರ್ತಿವೆ. ಹೀಗಾಗಿ ಭವಿಷ್ಯದ ತಂತ್ರಜ್ಞಾನಗಳನ್ನ ನಾವು ಅಭಿವೃದ್ಧಿಪಡಿಸಬೇಕು ಮತ್ತು ಅದರಲ್ಲಿ ಪ್ರಾಬಲ್ಯ ಸಾಧಿಸಬೇಕು. ಅಮೆರಿಕಕ್ಕೆ ಚೀನಾ ಒಡ್ಡುತ್ತಿರೋ ಟಫ್ ಕಾಂಪಿಟೇಷನ್ ಅನ್ನ ಎದುರಿಸಲು ರಿಪಬ್ಲಿಕನ್ ಸಂಸದರು ಬೆಂಬಲ ಕೊಡಬೇಕು ಅಂತಾನೂ ಹೇಳಿದ್ರು ಜೋ ಬೈಡೆನ್. ಇನ್ನು ಬೈಡೆನ್ ಭಾಷಣ ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾಯ್ತು. ಬೈಡೆನ್ ಹೀಗೆ ಕಾಂಗ್ರೆಸ್​ನಲ್ಲಿ ಭಾಷಣ ಮಾಡ್ತಿದ್ದಾಗ ಹಿಂದ್ಗಡೆ, ಅಂದ್ರೆ ಬೈಡೆನ್ ಅವರ ಬಲಬದಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಕೂತಿದ್ರೆ, ಎಡಬದಿಯಲ್ಲಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕೂತಿದ್ದರು. ಈ ಮೂಲಕ ಅಮೆರಿಕದ ಅಧ್ಯಕ್ಷರೊಬ್ಬರು ಭಾಷಣ ಮಾಡುವಾಗ ಇಬ್ಬರು ಮಹಿಳೆಯರು ಈ ರಿತಿ ಕೂತಿದ್ದು ಇದೇ ಮೊದಲಾಗಿತ್ತು. ಕಮಲಾ ಹ್ಯಾರಿಸ್​ ಅಮೆರಿಕದ ಮೊದಲ ಮಹಿಳಾ, ಕಪ್ಪು ವರ್ಣಿಯ ಮತ್ತು ಏಷ್ಯಾ ಮೂಲದ ಉಪಾಧ್ಯಕ್ಷೆಯಾಗಿದ್ರೆ. ನ್ಯಾನ್ಸಿ ಪೆಲೋಸಿ 2007ರಲ್ಲಿ ಕೆಳಮನೆಯಾದ ಹೌಸ್​ ಆಫ್​ ರೆಪ್ರೆಸೆಂಟೇಟಿವ್​​ನ ಮೊದಲ ಮಹಿಳಾ ಸ್ಪೀಕರ್ ಆಗಿ ಆಯ್ಕೆ ಆಗಿದ್ದರು.

-masthmagaa.com

Contact Us for Advertisement

Leave a Reply