ಡಿಕೆಶಿ ತಾಯಿ ಮತ್ತು ಪತ್ನಿಗೆ ಬಿಗ್ ರಿಲೀಫ್​​..! ಏನ್ ಗೊತ್ತಾ..?

ದೆಹಲಿ: ಡಿ.ಕೆ.ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಶಿವಕುಮಾರ್​​ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸದ್ಯಕ್ಕೆ ಸಮನ್ಸ್​​ಗೆ ತಡೆ ನೀಡಲಾಗಿದ್ದು, 10 ದಿನಗಳ ಬಳಿಕ ಪುನಃ ನೋಟಿಸ್ ನೀಡುವಂತೆ ಕೋರ್ಟ್​ ಸೂಚಿಸಿದೆ. ಅಲ್ಲದೆ ಅರ್ಜಿ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 12.30ಕ್ಕೆ ಮುಂದೂಡಿದೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ಅದನ್ನು ಪ್ರಶ್ನಿಸಿ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಗೌರಮ್ಮ ಹಾಗೂ ಉಷಾ ಶಿವಕುಮಾರ್ ನಾಳೆ ವಿಚಾರಣೆ ಬರುವ ಅಗತ್ಯವಿಲ್ಲ ಎಂದಿದೆ.

Contact Us for Advertisement

Leave a Reply