ಬಿಗ್ ಬಾಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ..!

13ನೇ ಆವೃತ್ತಿಯ ಬಿಗ್ ಬಾಸ್ ನಲ್ಲಿ ಕೆಲವು ಅಶ್ಲೀಲ ಕಾನ್ಸೆಪ್ಟ್ಗಳನ್ನು ಮಾಡಲಾಗುತ್ತಿದ್ದು, ಇದು ಭಾರತೀಯ ಸಂಸ್ಕøತಿಗೆ ವಿರುದ್ಧವಾಗಿದೆ. ಹೀಗಾಗಿ ಬಿಗ್ ಬಾಸ್ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ತೀವ್ರಗೊಂಡಿದೆ. ಕಾರ್ನಿ ಸೇನಾ ಸೇರಿದಂತೆ ಹಲವು ಸಂಘಟನೆಗಳು ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸ್ತಿವೆ. ಇದ್ರ ಬೆನ್ನಲ್ಲೇ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಪ್ರತಿಭಟನೆಯಲ್ಲಿ ನಿರತರಾಗಿದ್ದ ಹಲವರನ್ನು ಅರೆಸ್ಟ್ ಕೂಡ ಮಾಡಲಾಗಿದೆ.

ಬಿಗ್ ಬಾಸ್ 13ನೇ ಆವೃತ್ತಿಯಲ್ಲಿ ಬೆಡ್ ಫ್ರೆಂಡ್ಸ್ ಫರೆವರ್ ಎಂಬ ಕಾನ್ಸೆಪ್ಟ್ ತರಲಾಗಿದೆ. ಇದರಲ್ಲಿ ಹುಡುಗ ಮತ್ತು ಹುಡುಗಿ ಒಟ್ಟಿಗೆ ಮಲಗಲು ಅವಕಾಶ ಕಲ್ಪಿಸಲಾಗಿದೆ. ಇದು ಕಾರ್ನಿ ಸೇನಾ ಸೇರಿದಂತೆ ಹಲವಾರು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ಭಾರತದ ಸಂಸ್ಕøತಿಗೆ ವಿರುದ್ಧವಾಗಿದ್ದು, ಕಾರ್ಯಕ್ರಮ ನೋಡುವ ಮಕ್ಕಳ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರುತ್ತೆ ಅಂತ ಆರೋಪಿಸಿವೆ. ಜೊತೆಗೆ ಟ್ವಿಟ್ಟರ್‍ನಲ್ಲೂ ಬಾಯ್ ಕಾಟ್ ಬಿಗ್‍ಬಾಸ್ ಅಭಿಯಾನ ಶುರುವಾಗಿತ್ತು.

Contact Us for Advertisement

Leave a Reply