BIG BREAKING: ಬಿಗ್ ಬಾಸ್​ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆ

masthmagaa.com:

ಬಿಗ್​ ಬಾಸ್​ ಖ್ಯಾತಿಯ ಜಯಶ್ರೀ ರಾಮಯ್ಯ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಡಿಪ್ರೆಶನ್​ನಲ್ಲಿದ್ರು ಅಂತ ಹೇಳಲಾಗಿತ್ತು. ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಬೆಂಗಳೂರಿನ ಮಾಗಡಿ ರಸ್ತೆಯ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಂದಿರೋ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಅಂದ್ಹಾಗೆ ಈ ಹಿಂದೆ ಜುಲೈ 22ರಂದು ಜಯಶ್ರೀ ರಾಮಯ್ಯ ತಮ್ಮ ಫೇಸ್​ಬುಕ್​ ಅಕೌಂಟ್​​ನಲ್ಲಿ, ‘ಈ ಕೆಟ್ಟ ಜಗತ್ತು ಮತ್ತು ಡಿಪ್ರೆಶನ್​ಗೆ ವಿದಾಯ’ ಅಂತ ಪೋಸ್ಟ್ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು. ಆಗ ಮಾತನಾಡಿದ್ದ ಅವರ ಸ್ನೇಹಿತೆ ನಟಿ ಅಶ್ವಿತಿ ಅನ್ನೋರು, ‘ಜಯಶ್ರೀ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಕೊರೋನಾ ಬಿಕ್ಕಟ್ಟಿನ ನಂತರ ಅವಕಾಶಗಳು ಕೂಡ ಕಮ್ಮಿಯಾದ್ವು’ ಅಂತ ಹೇಳಿದ್ದರು.

-mathmagaa.com

Contact Us for Advertisement

Leave a Reply