ಜಗತ್ತಿನ ಅತಿದೊಡ್ಡ ಡ್ಯಾಂಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ…

ಫ್ರೆಂಡ್ಸ್, ನಿಮಗೆ ಗೊತ್ತಿದೆಯೋ ಇಲ್ಲವೋ ಭಾರತದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಡ್ಯಾಮ್ ಗಳಿವೆ. ಇಡೀ ವಿಶ್ವದಲ್ಲಿ ಇಂತಹ ಅದೆಷ್ಟು ಅಣೆಕಟ್ಟುಗಳಿವೆಯೋ ಗೊತ್ತಿಲ್ಲ. ಆದ್ರೆ ಜಗತ್ತಿನ ಅತಿ ಎತ್ತರದ ಹತ್ತು ಡ್ಯಾಮ್ ಗಳು ಯಾವುವು ಗೊತ್ತಾ..? ಅವು ಎಲ್ಲಿವೆ..? ಟಾಪ್ ಟೆನ್ ಡ್ಯಾಮ್ ಗಳಲ್ಲಿ ನಮ್ಮ ದೇಶದ ಅಣೆಕಟ್ಟು ಇದೆಯೋ, ಇಲ್ವೋ..? ಈ ಇಂಟರೆಸ್ಟಿಂಗ್ ಮಾಹಿತಿಯನ್ನ ನಾವು ನಿಮಗೆ ಹೇಳ್ತಾ ಹೋಗ್ತೀವಿ ನೋಡಿ..

ನಂಬರ್ 1
ಜಿನ್‍ಪಿಂಗ್-ಐ ಡ್ಯಾಂ, ಚೀನಾ – 305 ಮೀ
ಹೌದು ಫ್ರೆಂಡ್ಸ್ ಜಗತ್ತಿನ ಅತಿ ಎತ್ತರದ ಡ್ಯಾಂ ಇರೋದು ನಮ್ಮ ಪಕ್ಕದ ದೇಶ ಚೀನಾದಲ್ಲಿ. ಅದರ ಹೆಸರು ಜಿನ್ಪಿಂಗ್ ಐ ಡ್ಯಾಮ್. ಇದನ್ನ ಯಾಲೊಂಗ್ ನದಿಗೆ ಅಡ್ಡಲಾಗಿ ಕಟ್ಟಿದ್ದು ಚೀನಾದ ಸಿಚುವನ್ ಪ್ರಾಂತ್ಯದಲ್ಲಿದೆ. ಇದು ಬರೋಬ್ಬರಿ 305 ಮೀಟರ್ ಎತ್ತರವಿದೆ. ಅಂದರೆ ಸಾವಿರದ ಒಂದು ಅಡಿ. ಈ ಡ್ಯಾಮ್ನ ನಿರ್ಮಾಣ ಕೆಲಸ 2005 ರಲ್ಲಿ ಪ್ರಾರಂಭವಾಗಿ 2013ರಲ್ಲಿ ಪೂರ್ಣಗೊಂಡಿತ್ತು.

ನಂಬರ್ 2
ನುರೆಕ್ ಡ್ಯಾಂ, ತಜಕಿಸ್ತಾನ – 300 ಮೀ
ಫ್ರೆಂಡ್ಸ್ ಜಗತ್ತಿನ ಅತಿ ಎತ್ತರದ ಎರಡನೇ ಹಣೆಕಟ್ಟು ಇರುವುದು ತಜಕಿಸ್ತಾನದಲ್ಲಿ. ಇದನ್ನ ವಕ್ಫ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದರ ಎತ್ತರ ಬರೋಬ್ಬರಿ ಮುನ್ನೂರು ಮೀಟರ್. ಅಂದ್ರೆ 984 ಅಡಿ. ಇದರ ನಿರ್ಮಾಣ ಕಾರ್ಯ 1961 ರಲ್ಲಿ ಆರಂಭವಾಗಿ 1980 ರಲ್ಲಿ ಪೂರ್ಣಗೊಂಡಿತು. ಇನ್ನೊಂದು ವಿಚಾರ ಅಂದ್ರೆ 2013ರ ವರೆಗೂ ಜಗತ್ತಿನ ಎತ್ತರದ ಅಣೆಕಟ್ಟು ಇದೇ ಆಗಿತ್ತು. ಆದ್ರೆ 2013ರಲ್ಲಿ ಚೀನಾದ ಜಿನ್ಪಿಂಗ್ ಐ ಡ್ಯಾಮ್ ನಿರ್ಮಾಣವಾದ ಬಳಿಕ ಈ ಡ್ಯಾಮ್ ಎರಡನೇ ಸ್ಥಾನಕ್ಕೆ ಕುಸಿಯಿತು.

ನಂಬರ್ 3
ಕ್ಸಿಯಾವೋವಾನ್ ಡ್ಯಾಂ, ಚೀನಾ – 292 ಮೀ
ಫ್ರೆಂಡ್ಸ್ ಜಗತ್ತಿನ ಅತಿ ಎತ್ತರದ ಮೂರನೇ ಡ್ಯಾಮ್ ಕೂಡ ಇರೋದು ಚೀನಾದಲ್ಲಿ. ಇದನ್ನ ಮೆಕಾಂಗ್ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು, 292 ಮೀಟರ್ ಎತ್ತರವಿದೆ. ಈ ಡ್ಯಾಮ್ ನ ಪ್ರಮುಖ ಉದ್ದೇಶವೇ ಜಲ ವಿದ್ಯುತ್ ಉತ್ಪಾದನೆ. ಇದು ಚೀನಾದ ಯುನಾನ್ ಪ್ರಾಂತ್ಯದಲ್ಲಿದೆ.

ನಂಬರ್ 4
ಕ್ಸಿಲೌಡು ಡ್ಯಾಂ, ಚೀನಾ – 285.5 ಮೀ
ಫ್ರೆಂಡ್ಸ್ ವಿಶ್ವದ ಅತಿ ಎತ್ತರದ ನಾಲ್ಕನೇ ಅಣೆಕಟ್ಟು ಕೂಡ ಚೀನಾದಲ್ಲಿದೆ. ಕ್ಸಿಲೌಡು ಡ್ಯಾಂ 285.5 ಮೀಟರ್ ಎತ್ತರವಿದ್ದು, ಚೀನಾದ ಯಾಂಗ್ಟ್ಜೆ ಪ್ರದೇಶದಲ್ಲಿದೆ. ಮತ್ತೊಂದು ವಿಚಾರ ಅಂದ್ರೆ ಇದು ಜಗತ್ತಿನ ಮೂರನೇ ಅತಿದೊಡ್ಡ ಜಲವಿದ್ಯುತ್ ಕೇಂದ್ರ.

ನಂಬರ್ 5
ಗ್ರಾಂಡೆ ಡಿಕ್ಸೆನ್ಸ್ ಡ್ಯಾಂ, ಸ್ವಿಟ್ಜರ್ ಲ್ಯಾಂಡ್- 285 ಮೀ
ಫ್ರೆಂಡ್ಸ್ ಈ ಡ್ಯಾಮನ್ನು ಸ್ವಿಟ್ಜರ್ ಲ್ಯಾಂಡ್ ಸ್ವಿಸ್ ಆಲ್ಪ್ಸ್ ನಲ್ಲಿರುವ ಡಿಕ್ಸೆನ್ಸ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು 285 ಮೀಟರ್ ಎತ್ತರವಿದ್ದು, ಜಲವಿದ್ಯುತ್ ಉತ್ಪಾದನೆಯೇ ಇದರ ಪ್ರಮುಖ ಉದ್ದೇಶ.

ನಂಬರ್ 6
ಎಂಗುರಿ ಡ್ಯಾಂ, ಜಾರ್ಜಿಯಾ – 271.5 ಮೀ
ಫ್ರೆಂಡ್ಸ್ ಚೀನಾದ ಕ್ಸಿಯಾವೋವಾನ್ ಡ್ಯಾಂನಂತೆ ಎಂಗುರಿ ಡ್ಯಾಮ್ ನನ್ನ ಕಮಾನು ಆಕಾರದಲ್ಲಿ ಕಟ್ಟಲಾಗಿದೆ. ಇದು 271.5 ಮೀಟರ್ ಎತ್ತರವಿದ್ದು, ಜಾರ್ಜಿಯಾದ ಜ್ವಾರಿ ನಗರದಲ್ಲಿದೆ. ಇದು ಜಾರ್ಜಿಯಾದ ಅತಿ ಎತ್ತರದ ಅಣೆಕಟ್ಟು.

ನಂಬರ್ 7
ಯುಸುಫೆಲಿ ಡ್ಯಾಂ, ಟರ್ಕಿ – 270 ಮೀ
ಫ್ರೆಂಡ್ಸ್ ಜಗತ್ತಿನ ಏಳನೇ ಅತಿ ಎತ್ತರದ ಅಣೆಕಟ್ಟು ಟರ್ಕಿ ಯ ಯುಸುಫೆಲಿ ನಲ್ಲಿದೆ. ಸುಮಾರು 270 ಮೀಟರ್ ಎತ್ತರವಿರುವ ಈ ಡ್ಯಾಮ್.. ಜಲವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿದೆ. 2013ರಲ್ಲಿ ಆರಂಭವಾದ ಡ್ಯಾಮ್ ನಿರ್ಮಾಣಕಾರ್ಯ 2018 ರಲ್ಲಿ ಪೂರ್ಣಗೊಂಡಿತು. ಇದು ಟರ್ಕಿ ದೇಶದ ಅತಿ ಎತ್ತರದ ಡ್ಯಾಮ್ ಕೂಡ ಹೌದು.

ನಂಬರ್ 8
ನೌಝಾಡು ಡ್ಯಾಂ, ಚೀನಾ – 261.5 ಮೀ
ಫ್ರೆಂಡ್ಸ್ ಚೀನಾದ ಮೆಕಾಂಗ್ ನದಿಗೆ ಅಡ್ಡಲಾಗಿ ಕಟ್ಟಿರುವ ಎರಡನೇ ಡ್ಯಾಂ ಇದಾಗಿದೆ. ಇದು ಜಲವಿದ್ಯುತ್ ಉತ್ಪಾದನೆ ಜೊತೆಗೆ ಸುತ್ತಮುತ್ತಲಿನ ಕೃಷಿ ಭೂಮಿಗೆ ನೀರು ಪೂರೈಸಲು ಸಹಕಾರಿಯಾಗಿದೆ. ಈ ಡ್ಯಾಮ್ ನಿರ್ಮಾಣದಿಂದ ಸಾಕಷ್ಟು ಅರಣ್ಯ ಪ್ರದೇಶ ನಾಶವಾಗಿದ್ದ ರಿಂದ ಭಾರಿ ಟೀಕೆ ಕೂಡ ಕೇಳಿಬಂದಿತ್ತು.

ನಂಬರ್ 9
ಮ್ಯಾನುಯೆಲ್ ಮೊರೆನೋ ಟೊರೆಸ್, ಮೆಕ್ಸಿಕೋ – 261 ಮೀ
ಫ್ರೆಂಡ್ಸ್ ಮೆಕ್ಸಿಕೋದ ಗ್ರಿಜವಾಲಾ ನದಿಗೆ ಕಟ್ಟಲಾಗಿರುವ 261 ಮೀಟರ್ ಎತ್ತರದ ಮ್ಯಾನುಯೆಲ್ ಮೊರೆನೋ ಟೊರೆಸ್ ಡ್ಯಾಂ.. ವಿಶ್ವದ 9ನೇ ಅತಿ ಎತ್ತರದ ಡ್ಯಾಂ ಆಗಿದೆ. ಇದನ್ನ 1980 ರಲ್ಲಿ ಕಟ್ಟಿದ್ದು, ಇತ್ತೀಚೆಗಷ್ಟೇ ನವೀಕರಿಸಲಾಗಿದೆ. ಇದು ಮೆಕ್ಸಿಕೋದ ಅತಿ ಎತ್ತರದ ಹಾಗೂ ಅತಿ ದೊಡ್ಡ ವಿದ್ಯುತ್ ಕೇಂದ್ರವಾಗಿದೆ.

ನಂಬರ್ 10
ತೆಹ್ರಿ ಡ್ಯಾಂ, ಭಾರತ – 260.5 ಮೀ
ಫ್ರೆಂಡ್ಸ್ ಕೊನೆಗೂ ಜಗತ್ತಿನ ಅತಿ ಎತ್ತರದ ಟಾಪ್ ಟೆನ್ ಅಣೆಕಟ್ಟುಗಳ ಪಟ್ಟಿಯಲ್ಲಿ ಭಾರತದ ಒಂದು ಡ್ಯಾಮ್ ಕೂಡ ಸೇರಿಕೊಂಡಿದೆ. ಅದೇ ಉತ್ತರಖಂಡ್ ನ ತೆಹ್ರಿ ಗ್ರಾಮದಲ್ಲಿ ಭಗೀರಥಿ ನದಿಗೆ ಅಡ್ಡಲಾಗಿ ಕಟ್ಟಿರೋ ಅಣೆಕಟ್ಟು. ಸುಮಾರು 260.5 ಮೀಟರ್ ಅಂದ್ರೆ 854 ಅಡಿ ಎತ್ತರವಿದೆ ಈ ತೆಹ್ರಿ ಡ್ಯಾಂ. ಭಾರತದ ಪಾಲಿಗೆ ಇದೆ ಅತಿ ಎತ್ತರದ ಅಣೆಕಟ್ಟು. ಇದನ್ನ 2006ರಲ್ಲಿ ಕಟ್ಟಲಾಯಿತು. ಆದ್ರೆ ಅಣೆಕಟ್ಟು ನಿರ್ಮಾಣದಿಂದ ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಡ್ಯಾಮೇಜ್ ಆಗಿದ್ರಿಂದ ಸಾಕಷ್ಟು ವಿರೋಧ ಕೇಳಿಬಂದಿತ್ತು. ಅಂದಹಾಗೆ ಜಲ ವಿದ್ಯುತ್ ಉತ್ಪಾದನೆ, ಕೃಷಿ ಭೂಮಿಗೆ ನೀರಾವರಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಈ ಡ್ಯಾಮ್ನ ನೀರನ್ನ ಬಳಸಲಾಗುತ್ತೆ.

Contact Us for Advertisement

Leave a Reply