ಪತ್ನಿ ತುಂಡುಡುಗೆ ಹಾಕಲಿಲ್ಲ ಎಂದು ತಲಾಖ್ ಕೊಟ್ಟ ಭೂಪ..!

ಬಿಹಾರ: ಪತ್ನಿ ಹೇಳಿದ್ದು ಮಾತು ಕೇಳಲ್ಲ. ಮಾಡರ್ನ್ ಬಟ್ಟೆ ಹಾಕ್ಕೊಂಡು ಓಡಾಡ್ತಾಳೆ ಅಂತ ಜಗಳ ಆಡೋರನ್ನು ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ತನ್ನ ಹೆಂಡ್ತಿ ಮಾಡರ್ನ್ ಬಟ್ಟೆ ಹಾಕಲಿಲ್ಲ ಅಂತ ತ್ರಿವಳಿ ತಲಾಖ್ ಕೊಟ್ಟು ಮನೆಗೆ ಕಳುಹಿಸಿದ್ದಾನೆ. ಇಮ್ರಾನ್ ಮುಸ್ತಾಫಾ ಎಂಬಾತ ತನ್ನ ಪತ್ನಿ ನೂರಿ ಫಾತಿಮಾಗೆ ಮಾಡರ್ನ್ ಆಗಿರುವಂತೆ ಒತ್ತಾಯಿಸಿದ್ದಾನೆ. ಮಾಡರ್ನ್ ಬಟ್ಟೆ ಹಾಕೋದು, ಎಣ್ಣೆ ಹಾಕೋದೆಲ್ಲಾ ಮಾಡ್ಬೇಕು ಅಂತ ಒತ್ತಾಯಿಸಿದ್ದಾನೆ. ಆದ್ರೆ ಫಾತಿಮಾ ಇದಕ್ಕೆ ಒಪ್ಪದೇ ಇದ್ದಿದ್ದರಿಂದ ತ್ರಿವಳಿ ತಲಾಖ್ ಕೊಟ್ಟಿದ್ದಾನೆ.

2015 ರಲ್ಲಿ ಫಾತಿಮಾರನ್ನು ಇಮ್ರಾನ್ ಮುಸ್ತಫಾ ಮದ್ವೆಯಾಗಿದ್ದ. ಆದ್ರೆ ಮದ್ವೆಯಾದ ಕೆಲ ತಿಂಗಳ ಬಳಿಕ ಮಾಡರ್ನ್ ಹುಡುಗಿಯರಂತೆ ಇರಬೇಕೆಂದು ಹೇಳಲು ಶುರು ಮಾಡಿದ. ಅಷ್ಟೇ ಅಲ್ಲದೇ ತುಂಡುಡುಗೆಯನ್ನು ತಂದು ಧರಿಸುವಂತೆ ಒತ್ತಾಯಿಸುತ್ತಿದ್ದ. ರಾತ್ರಿ ಪಾರ್ಟಿಗೆ ಕರೆದುಕೊಂಡು ಹೋಗಿ ಎಣ್ಣೆ ಹೊಡೆಯುವಂತೆ ಒತ್ತಾಯ ಮಾಡುತ್ತಿದ್ದ. ನಿರಾಕರಿಸಿದ್ರೆ ಹಲ್ಲೆ ಮಾಡ್ತಿದ್ದ ಎಂದು ಆರೋಪಿಸಿದ್ದಾರೆ.

ಆದ್ರೆ ಯಾವಾಗ ಫಾತಿಮಾ ಪತಿಯ ಇಚ್ಛೆಗೆ ಅನುಸಾರವಾಗಿ ಇರಲು ಆಗಲ್ಲ ಅಂದ್ರೋ ಆಗ ತ್ರಿವಳಿ ತಲಾಖ್ ನೀಡಿ ಮನೆಯಿಂದಲೇ ಹೊರಗೆ ಕಳುಹಿಸಿದ್ದಾರೆ. ಹೀಗಾಗಿ ಈಗ ಮಹಿಳೆ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.

Contact Us for Advertisement

Leave a Reply