ಪ್ರವಾಹದಲ್ಲಿ ಮುಳುಗಿದ ಬಿಜೆಪಿ ಸಂಸದ..! ವಿಡಿಯೋ ನೋಡಿ..

ಬಿಹಾರದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ನಿನ್ನೆ ಪಾಟ್ನಾದಲ್ಲಿನ ನೆರೆ ಪೀಡಿತ ಪಪ್ರದೇಶಗಳ ವೀಕ್ಷಣೆಗೆ ಅಂತ ತೆರಳಿದ್ದ ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ಇದ್ದ ಬೋಟ್ ಮಗುಚಿ ಬಿದ್ದಿದೆ. ಸಂಸದರು ನೀರಿನಲ್ಲಿ ಬಿದ್ದು ಒದ್ದಾಡುವಾಗ ಸ್ಥಳೀಯರೇ ರಕ್ಷಣೆ ಮಾಡಿದ್ದಾರೆ. ಬಿಹಾರದಲ್ಲಿ ಮಳೆಯಬ್ಬರ ಜೋರಾಗಿದ್ದು ರಸ್ತೆಯಲ್ಲೆಲ್ಲಾ ಕುತ್ತಿಗೆವರೆಗೆ ನೀರು ನಿಂತಿದೆ. ಹೀಗಾಗಿಯೇ ಸಂಸದ ರಾಮ್ ಕೃಪಾಲ್ ಯಾದವ್ ನಾಡದೋಣಿ ಹತ್ತಿ ಹೋಗುತ್ತಿದ್ರು. ಈ ವೇಳೆ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ, ಎದ್ದಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ನಿತೀಶ್ ಕುಮಾರ್ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ ಅಂತ ಟೀಕಿಸಿದ್ರು. ಇನ್ನು ಸಂಸದರ ದೋಣಿಯಿಂದ ಬಿದ್ದ ವಿಡಿಯೋ ಫುಲ್ ವೈರಲ್ ಆಗಿದೆ.

Contact Us for Advertisement

Leave a Reply