ಪಿಓಕೆಯಲ್ಲಿ ಪಾಕ್ ಷಡ್ಯಂತ್ರ..! ನಾವ್ ರೆಡಿ ಅಂದ್ರು ಬಿಪಿನ್ ರಾವತ್

ಪಿಓಕೆಯಲ್ಲಿ ಭಾರೀ ಪ್ರಮಾಣದ ಚಟುವಟಿಕೆಗಳು ನಡೆಯುತ್ತಿದ್ದು, ಭಾರತ ಕೂಡಾ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಬಿಪಿನ್ ರಾವತ್, ಹಿಂದೆ ನಡೆದ ಯುದ್ಧಗಳಂತೆ ಈ ಬಾರಿಯೂ ಸಾಂಪ್ರದಾಯಿಕ ಸಮರಕ್ಕೆ ಪಾಕಿಸ್ತಾನ ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಪಾಕಿಸ್ತಾನ ಸಾಂಪ್ರದಾಯಿಕವಾಗಿ ಯುದ್ಧಕ್ಕೆ ಬಂದು ಸೋತುಹೋಗಿದೆ. ಹೀಗಾಗಿ ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನು ಮುಂದುವರಿಸಲಿದ್ದು, ಅದಕ್ಕಾಗಿಯೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನೇರವಾಗಿ ನೆರವು ನೀಡುತ್ತಿದೆ ಅಂತ ಹೇಳಿದ್ದಾರೆ. ಆದ್ರೆ ಪಾಕಿಸ್ತಾನದ ಯಾವುದೇ ಷಡ್ಯಂತ್ರವನ್ನು ಮಟ್ಟಹಾಕುವಲ್ಲಿ ಭಾರತ ಸೇನೆ ಸಮರ್ಥವಾಗಿದೆ. ಮತ್ತು ಎಲ್ಲಾ ರೀತಿಯಲ್ಲಿ ರೆಡಿಯಾಗಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Contact Us for Advertisement

Leave a Reply