ಬಿಜೆಪಿಗೆ ಬೈದು ಬೈದು ತಾನು ಮಾಡಿದ್ದು ಅದೇ..! ಕಾಂಗ್ರೆಸ್ ಅವಸ್ಥೆ ನೋಡಿ..!

ಮಹಾರಾಷ್ಟ್ರ: ರಾಜಕಾರಣಿಗಳ ಹಣೆಬರಹವೇ ಇಷ್ಟು ಅಂತ ಅನ್ನಿಸುತ್ತೆ. ಬೇರೆಯವರನ್ನು ದೂರೋದು ಮತ್ತೆ ತಾನೂ ಅದೇ ಕೆಲಸವನ್ನು ಮಾಡೋದು. ರಾಜ್ಯದಲ್ಲಿ ಪ್ರವಾಹ ಬಂದು ಜನ ಒದ್ದಾಡುತ್ತಿದ್ದರೂ ಸಿಎಂ ಯಡಿಯೂರಪ್ಪ ಸೇರಿದಂತೆ ಡಿಸಿಎಂಗಳೂ ಮಹಾರಾಷ್ಟ್ರಕ್ಕೆ ಹೋಗಿ ಚುನಾವಣೆ ಪ್ರಚಾರ ಮಾಡ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಸಿಕ್ಕಾಪಟ್ಟೆ ವಿರೋಧ ವ್ಯಕ್ತಪಡಿಸಿದ್ರು. ಸಿದ್ದರಾಮಯ್ಯ ಕೂಡ ಅಧಿವೇಶನ ಮೂರೇ ದಿನಕ್ಕೆ ಮೊಟಕುಗೊಳಿಸಿದ್ದಕ್ಕೆ ಕೆರಳಿ ಕೆಂಡವಾಗಿದ್ದರು. ಆದ್ರೆ ಈಗ ಸಿದ್ದರಾಮಯ್ಯ ಕೂಡ ಬಿಜೆಪಿ ಹಾದಿಯನ್ನೇ ಹಿಡಿದಿದ್ದು, ಮಹಾರಾಷ್ಟ್ರಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ. ಕಾಂಗ್ರೆಸ್​​​ನ ಈ ಇಬ್ಬಗೆ ನೀತಿಗೆ ಬಿಜೆಪಿಗರು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಯಡಿಯೂರಪ್ಪ ಅವರಂತೂ ಮತ ನೀಡಿದ್ರೆ ನೀರು ಕೊಡ್ತೀನಿ ಅಂತ ಮಹಾರಾಷ್ಟ್ರದಲ್ಲಿ ಭರವಸೆ ಕೊಟ್ಟಿದ್ದಾರೆ. ಆದ್ರೆ ಕಳಸಾ-ಬಂಡೂರಿ ನೀರಿಗಾಗಿ ಸಾವಿರಾರು ರೈತರು ಬೆಂಗಳೂರಿಗೆ ಬಂದು ಪ್ರತಿಭಟನೆ ನಡೆಸುತ್ತಿರೋದು ಯಾರ ಕಣ್ಣಿಗೂ ಕಾಣದೇ ಇರೋದು ವಿಪರ್ಯಾಸವೇ ಸರಿ.

Contact Us for Advertisement

Leave a Reply