ಡೆನ್ಮಾರ್ಕ್​ಗೆ ಹೋಗಲು ಅನುಮತಿಸದ ಸರ್ಕಾರದ ವಿರುದ್ಧ ಕೇಜ್ರಿವಾಲ್​​ ಕೆಂಡ

ದೆಹಲಿ: ಡೆನ್ಮಾರ್ಕ್​​ ಪ್ರವಾಸಕ್ಕೆ ಅನುಮತಿ ನೀಡದ ಕೇಂದ್ರ ಸರ್ಕಾರದ ವಿರುದ್ದ ಅರವಿಂದ ಕೇಜ್ರಿವಾಲ್ ಕೆಂಡಕಾರಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಡೆನ್ಮಾರ್ಕ್​​​​ನಲ್ಲಿ ನಡೆದ ಹವಾಮಾನ ಬದಲಾವಣೆಯ ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ಸರ್ಕಾರ ಇದಕ್ಕೆ ಅನುಮತಿ ನೀಡಿರಲಿಲ್ಲ.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಡೆನ್ಮಾರ್ಕ್​​​ಗೆ ಹೋಗಲು ಬಿಜೆಪಿ ನನಗೆ ಅವಕಾಶ ನೀಡಲಿಲ್ಲ. ಇದ್ರಿಂದ ಬಿಜೆಪಿ ಏನು ಅನ್ನೋದು ಇಡೀ ವಿಶ್ವಕ್ಕೆ ಗೊತ್ತಾಗಿದೆ. ಬಿಜೆಪಿ ನನಗೆ ಹೋಗಲು ಬಿಡದಿದ್ದರೂ ಆಯೋಜನರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲು ಅವಕಾಶ ಕೊಟ್ಟಿದ್ದಾರೆ. ಇದು ನನ್ನ ಹೆಮ್ಮೆಯಲ್ಲ. ಇದು ಜನರ ಹೆಮ್ಮೆ ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಕೇಜ್ರಿವಾಲ್ ಮೇಯರ್​​ಗಳ ಸಮಾವೇಶಕ್ಕೆ ಹೋಗಿ ಏನ್ಮಾಡ್ತಾರೆ..? ಎಂದು ಬಿಜೆಪಿಯ ನಾಯಕರೊಬ್ಬರು  ಕೇಳಿದ್ದಾರೆ. ಆದ್ರೆ ಬಿಜೆಪಿಯ ಮೇಯರ್​ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಯೇ ಇಲ್ಲ ಅನ್ನೋದು ಅವರಿಗೆ ಗೊತ್ತಿಲ್ಲ. ಸಮಾವೇಶಕ್ಕೆ ಮೇಯರ್​​​​​​​​ಗಳನ್ನು ಆಹ್ವಾನಿಸದಿದ್ದರೆ ನಾವೇನು ಮಾಡೋದು ಎಂದು ಪ್ರಶ್ನಿಸಿದ್ದಾರೆ.

ಈ ಮೂಲಕ ಡೆನ್ಮಾರ್ಕ್​ ಕಾರ್ಯಕ್ರಮಕ್ಕೆ ಅನುಮತಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

Contact Us for Advertisement

Leave a Reply