masthmagaa.com:

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಸ್ವಪಕ್ಷೀಯ ಶಾಸಕರೇ ಆಗಿರೋ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ನನ್ನ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೆಲವೊಂದು ಕೆಲಸ ಮಾಡಿಸಬೇಕಿದೆ. ಹೀಗಾಗಿ ಆರೋಗ್ಯ ಸಚಿವ ಡಾ. ಸುಧಾಕರ್​ಗೆ 15 ದಿನಗಳಿಂದ ಕಾಲ್ ಮಾಡ್ತಿದ್ದೀನಿ. ಅವರು ನನ್ನ ಫೋನ್ ಸ್ವೀಕರಿಸುತ್ತಿಲ್ಲ. ನಿನ್ನೆ ಅವರ ಆಪ್ತ ಸಹಾಯಕರಿಗೆ (PA) ಫೋನ್ ಮಾಡಿ ಸಚಿವರೇನು ದೇವಲೋಕದಿಂದ ಇಳಿದು ಬಂದಿದ್ದಾರಾ ಅಂತ ಕೇಳಿದ್ದೀನಿ. ನನ್ನಂಥವನಿಗೇ ಈ ರೀತಿ ಆಟ ಆಡಿಸ್ತಾರೆ ಅಂದ್ರೆ, ಬೇರೆಯವರ ಕಥೆ ಏನು ಯೋಚ್ನೆ ಮಾಡಿ. ಇನ್ನೊಂದುಸಲ ಫೋನ್ ಸ್ವೀಕರಿಸಿಲ್ಲ ಅಂದ್ರೆ ರೇಣುಕಾಚಾರ್ಯನ ಇನ್ನೊಂದು ಮುಖ ತೋರಿಸಬೇಕಾಗುತ್ತೆ’ ಅಂತ ಶಾಸಕ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply